alex Certify ಮಂಗಳ ಗ್ರಹದ ಮೇಲಿತ್ತಾ ಸಾಗರ ? ಅತ್ಯಂತ ಕುತೂಹಲದ ಪುರಾವೆ ಪತ್ತೆ ಹಚ್ಚಿದ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳ ಗ್ರಹದ ಮೇಲಿತ್ತಾ ಸಾಗರ ? ಅತ್ಯಂತ ಕುತೂಹಲದ ಪುರಾವೆ ಪತ್ತೆ ಹಚ್ಚಿದ ವಿಜ್ಞಾನಿಗಳು

ಮಂಗಳ ಗ್ರಹದ ಮೇಲೆ ಜೀವಿಗಳ ಇರುವಿಕೆ ಕುರಿತಾಗಿ ಕೆಲ ದಶಕಗಳಿಂದ ಭಾರಿ ಚರ್ಚೆ ನಡೆಯುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಸಿಕ್ಕಿರುವ ಸಾಕ್ಷ್ಯವು ಇದನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಮಂಗಳನ ಮೇಲ್ಮೈಯಲ್ಲಿ ಸಾಗರ ಇರುವ ಕುರಿತು ಚರ್ಚೆಯಾಗುತ್ತಿದ್ದಂತೆಯೇ ಇಲ್ಲಿ ಸಿಕ್ಕಿದೆ ಎನ್ನಲಾದ ಪುರಾವೆಯು ವಿವಾದಾಸ್ಪದವಾಗಿತ್ತು.

ಆದಾಗ್ಯೂ, ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಪ್ಲಾನೆಟ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಈಗ ಪುರಾವೆಯನ್ನು ಕಂಡುಹಿಡಿದಿದೆ. ಮಂಗಳ ಗ್ರಹದಲ್ಲಿ ವಿಶಾಲವಾದ ಜಲಮೂಲದ ಪ್ರಬಲ ಪುರಾವೆಯನ್ನು ಕಂಡುಹಿಡಿದಿದೆ. ಈಗ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಇಲ್ಲಿ ಪ್ರಾಚೀನವಾಗಿರುವ ಸಾಗರ ಇದ್ದಿರುವ ಬಗ್ಗೆ ಕಂಡುಹಿಡಿದಿರುವುದಾಗಿ ತಿಳಿಸಲಾಗಿದೆ.

ಜಿಯೋಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ಬೆಂಜಮಿನ್ ಕಾರ್ಡೆನಾಸ್ ನೇತೃತ್ವದ ಸಂಶೋಧಕರ ತಂಡವು ಇದನ್ನು ಬಹಿರಂಗಪಡಿಸಿದೆ. ಇಲ್ಲಿರುವ ಕೆಸರಿನ ಪದರಗಳನ್ನು ವೀಕ್ಷಿಸುವ ಮೂಲಕ ಸಾಗರದ ಕುರಿತು ಪುರಾವೆ ಸಿಕ್ಕಿರುವುದಾಗಿ ಸಂಶೋಧಕರು ಹೇಳಿದ್ದಾರೆ. ಇದನ್ನು ಸ್ಟ್ರಾಟಿಗ್ರಫಿ ಎಂದು ಕರೆಯಲಾಗುತ್ತದೆ. ಕಾರ್ಡೆನಾಸ್ ತಂಡವು ನಾಸಾದ ಸಹಯೋಗದೊಂದಿಗೆ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಅನ್ನು ಬಳಸಿ ಇದನ್ನು ಪತ್ತೆ ಹಚ್ಚಿದೆ.

ಸಂಶೋಧಕರು ಸರಿಸುಮಾರು 3.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಸಾಗರದ ಬಲವಾದ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಕೆಂಪು ಗ್ರಹದಲ್ಲಿ ಬೃಹತ್ ಸಾಗರವು ಅಸ್ತಿತ್ವದಲ್ಲಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ ಮತ್ತು ಅದರ ನೀರು ಮಂಗಳದ ಮೇಲ್ಮೈಯಲ್ಲಿ ಶಾಶ್ವತವಾದ ಗುರುತುಗಳನ್ನು ಬಿಟ್ಟಿರುವುದಾಗಿ ಸಂಶೋಧಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...