alex Certify ʼಜೀವ ವಿಮೆʼ ತೆಗೆದುಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜೀವ ವಿಮೆʼ ತೆಗೆದುಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಜೀವ ವಿಮೆ ಮಹತ್ವ ಎಲ್ಲರಿಗೂ ತಿಳಿದಿದೆ. ಕೊರೊನಾ ಕಾಲದಲ್ಲಿ ಇದು ಅನೇಕರಿಗೆ ನೆರವಾಗಿದೆ. ಸಾವನ್ನ ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಸಾವಿನ ಆರ್ಥಿಕ ನೋವನ್ನು ವಿಮೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಸಾಕಷ್ಟು ವಿಮಾ ಕಂಪನಿಗಳಿವೆ. ವಿಮೆ ಖರೀದಿ ಮೊದಲು ಯಾವ ಯಾವ ಸಂದರ್ಭದಲ್ಲಿ ವಿಮೆ ನೆರವಾಗುತ್ತದೆ ಹಾಗೂ ವಿಮೆಯ ನಿಯಮವೇನು ಎಂಬುದನ್ನು ತಿಳಿಯಬೇಕಾಗುತ್ತದೆ.

ಆತ್ಮಹತ್ಯೆ ಮಾಡಿಕೊಂಡ್ರೆ ಅನೇಕ ವಿಮಾ ಕಂಪನಿಗಳು ಹಣ ನೀಡುವುದಿಲ್ಲ. ಆದ್ರೆ ಕೆಲ ಕಂಪನಿಗಳು ವಿಮೆ ತೆಗೆದುಕೊಂಡ 1 ವರ್ಷದ ನಂತ್ರ ಆತ್ಮಹತ್ಯೆ ಮಾಡಿಕೊಂಡ್ರೆ ನೆರವು ನೀಡುತ್ತವೆ.

ಆತ್ಮಹತ್ಯೆಯ ಹೊರತಾಗಿ ಬೇರೆ ಮಾರಣಾಂತಿಕ ಚಟುವಟಿಕೆಗಳಲ್ಲಿ ಅಥವಾ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾವನ್ನಪ್ಪಿದ್ರೆ, ಅದು ಕೂಡ ವಿಮೆ ವ್ಯಾಪ್ತಿಗೆ ಬರುವುದಿಲ್ಲ.

ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ಗರ್ಭ ಧರಿಸಿದಾಗ ಹಾಗೂ ಹೆರಿಗೆ ವೇಳೆ ಸಾವನ್ನಪ್ಪಿದ್ರೂ ಕೆಲ ವಿಮೆ ಸಿಗುವುದಿಲ್ಲ. ವಿಮೆ ಖರೀದಿ ವೇಳೆ ಇದ್ರ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಾಗುತ್ತದೆ.

ಕೆಲ ಕೆಟ್ಟ ಚಟದ ಬಗ್ಗೆ ವಿಮೆ ಖರೀದಿ ಮಾಡುವಾಗ ಗ್ರಾಹಕರು ಮಾಹಿತಿ ನೀಡುವುದಿಲ್ಲ. ಧೂಮಪಾನದಿಂದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗಿ, ಸಾವನ್ನಪ್ಪಿದ್ದು, ಅದ್ರ ಬಗ್ಗೆ ಪಾಲಿಸಿ ವೇಳೆ ಮಾಹಿತಿ ನೀಡದೆ ಹೋದಲ್ಲಿ, ವಿಮೆ ಹಣ ಸಿಗುವುದಿಲ್ಲ. ಹಾಗಾಗಿ ವಿಮೆ ಖರೀದಿ ವೇಳೆ ಎಲ್ಲ ಮಾಹಿತಿ ನೀಡಬೇಕಾಗುತ್ತದೆ.

ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ; ಸೇಫ್ ಆಗಿ ಮನೆಗೆ ಬಿಟ್ಟು ಪರಾರಿಯಾದ ಕಿಡ್ನಾಪರ್ಸ್

ವಿಮಾದಾರರು ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ವಿಮಾನ ಅಪಘಾತದ ಸಮಯದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ, ವಿಮೆ ಸೌಲಭ್ಯ ಸಿಗುವುದಿಲ್ಲ. ವಿಮಾದಾರನು ವಾಣಿಜ್ಯ ವಿಮಾನಯಾನದಲ್ಲಿ ಪ್ರಯಾಣಿಸುವಾಗ ಮರಣ ಹೊಂದಿದರೆ, ವಿಮಾನಯಾನವು ಅದರ ವೇಳಾಪಟ್ಟಿ ಮತ್ತು ಮಾರ್ಗವನ್ನು ಅನುಸರಿಸಿದರೆ ಕೆಲ ಕಂಪನಿ ವಿಮೆ ನೀಡುತ್ತದೆ.

ವಿಮಾದಾರ ಯುದ್ಧದಲ್ಲಿ ಸಾವನ್ನಪ್ಪಿದ್ರೂ ವಿಮೆ ಹಣ ಸಿಗುವುದಿಲ್ಲ. ಜೀವ ವಿಮೆಯನ್ನು ತೆಗೆದುಕೊಳ್ಳುವಾಗ, ಎಲ್ಲಾ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...