alex Certify ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ವಾಯಮಾಲಿನ್ಯವು ಮೆದುಳಿನಲ್ಲಿ ಉರಿಯೂತವನ್ನು ಉಂಟು ಮಾಡೋದ್ರಿಂದ ವೀರ್ಯ ಸಂಖ್ಯೆಯು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಯೂನಿವರ್ಸಿಟಿ ಆಫ್​ ಮೇರಿಲ್ಯಾಂಡ್​ ಸ್ಕೂಲ್​ ಆಫ್​ ಮೆಡಿಸಿನ್​​ನ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನದ ವರದಿಯನ್ನು ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್’ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.

ಮೆದುಳಿಗೂ ಹಾಗೂ ಸಂತಾನೋತ್ಪತ್ತಿ ಅಂಗಗಳಿಗೂ ಸಂಬಂಧ ಇದೆ ಅನ್ನೋದನ್ನು ವಿಜ್ಞಾನಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ. ಉದಾಹರಣೆಗೆ ಒತ್ತಡದ ಪರಿಸ್ಥಿತಿಯಲ್ಲಿ ಮಹಿಳೆಯ ಮುಟ್ಟಿನ ಅವಧಿಯಲ್ಲಿ ಏರುಪೇರು ಉಂಟಾಗುತ್ತದೆ. ಅದೇ ರೀತಿ ಈ ಅಧ್ಯಯನದಲ್ಲಿ ಕಲುಷಿತ ಗಾಳಿಯನ್ನು ಉಸಿರಾಡೋದ್ರಿಂದ ಪುರುಷರಲ್ಲಿ ವೀರ್ಯದ ಉತ್ಪತ್ತಿಯಲ್ಲಿ ಕುಂಠಿತ ಉಂಟಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಇಲಿಗಳ ಮೆದುಳಿನಿಂದ ಒಂದೇ ಒಂದು ಪ್ರತಿಬಂಧಕವನ್ನು ತೆಗೆದು ಹಾಕಿದ ಬಳಿಕ ವಾಯು ಮಾಲಿನ್ಯದಿಂದ ಕನಿಷ್ಟ 1 ವೀರ್ಯದ ಸಂಖ್ಯೆಯಲ್ಲಿ ಕುಂಠಿತ ಕಂಡಿದ್ದನ್ನು ನಾವು ಗಮನಿಸಿದ್ದೇವೆ. ಈ ಅಧ್ಯಯನದಿಂದಾಗಿ ನಾವು ಮುಂದಿನ ದಿನಗಳಲ್ಲಿ ವಾಯುಮಾಲಿನ್ಯದಿಂದ ಸಂತಾನೋತ್ಪತ್ತಿ ಅಂಗಗಳ ಮೇಲೆ ಆಗುತ್ತಿರುವ ಪರಿಣಾಮಗಳ ವಿರುದ್ಧ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಈ ಅಧ್ಯಯನದ ಪ್ರಧಾನ ಲೇಖಕ ಝೇಕಾಂಗ್​​​ ಯಿಂಗ್​ ಹೇಳಿದ್ರು.

ಸೆಪ್ಟೆಂಬರ್​ನಲ್ಲಿ ಪ್ರಕಟಿಸಲಾದ ಪ್ರಸ್ತುತ ಅಧ್ಯಯನದಲ್ಲಿ ವಾಯುಮಾಲಿನ್ಯದಿಂದ ವೀರ್ಯದ ಸಂಖ್ಯೆಯಲ್ಲಿ ಹೇಗೆ ಕುಂಠಿತ ಕಂಡುಬಂದಿದೆ ಎಂಬುದನ್ನು ಪತ್ತೆ ಹಚ್ಚಿದೆ.

ವೀರ್ಯ ಎಣಿಕೆಗಳನ್ನು ಪರೀಕ್ಷಿಸುವ ಮೊದಲು ಆರೋಗ್ಯಕರ ಹಾಗೂ ಐಕೆಕೆ2 ರೂಪಾಂತರಿತ ಇಲಿಗಳ ಮೇಲೆ ಕಲುಷಿತ ವಾಯುವಿನ ಪರಿಣಾಮವನ್ನು ಅಧ್ಯಯನ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...