alex Certify ಪಿಂಚಣಿದಾರರ ಗಮನಕ್ಕೆ: ಮನೆಯಲ್ಲೇ ಕುಳಿತು ಸಲ್ಲಿಸಬಹುದು ಜೀವನ ಪ್ರಮಾಣ ಪತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರ ಗಮನಕ್ಕೆ: ಮನೆಯಲ್ಲೇ ಕುಳಿತು ಸಲ್ಲಿಸಬಹುದು ಜೀವನ ಪ್ರಮಾಣ ಪತ್ರ….!

ಪಿಂಚಣಿದಾರರು ಯಾವುದೇ ಅಡೆತಡೆ ಇಲ್ಲದೆಯೇ ಮಾಸಿಕ ಪಿಂಚಣಿಯನ್ನು ಪಡೆಯಬೇಕು ಅಂದರೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿವುದು ಅವಶ್ಯಕವಾಗಿದೆ. ಈ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್​ 30 ಕೊನೆಯ ದಿನಾಂಕವಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅಕ್ಟೋಬರ್​ 1ರಿಂದಲೇ ಅವಕಾಶ ನೀಡಲಾಗಿದೆ. 80 ವರ್ಷ ಕೆಳಗಿನ ಪಿಂಚಣಿದಾರರು ನವೆಂಬರ್​ 1ರಿಂದ ಜೀವನ ಪ್ರಮಾಣಪತ್ರವನ್ನು ಒದಗಿಸಲು ಆರಂಭಿಸಬಹುದಾಗಿದೆ.

ಜೀವನ ಪ್ರಮಾಣ ಪತ್ರ ಅಥವಾ ಲೈಫ್​ ಸರ್ಟಿಫಿಕೇಟ್​​ ಪಿಂಚಣಿಯನ್ನು ಪಡೆಯಲು ನೀವು ಸಲ್ಲಿಸಲೇಬೇಕಾದ ಅತ್ಯವಶ್ಯಕ ಪ್ರಮಾಣ ಪತ್ರವಾಗಿದೆ. ಪಿಂಚಣಿ ಪಡೆಯುವ ವ್ಯಕ್ತಿಯು ಇನ್ನೂ ಬದುಕಿದ್ದಾರೆ ಎಂದು ಸಾಬೀತುಪಡಿಸುವ ದಾಖಲೆ ಇದಾಗಿದೆ.

ಸಾಮಾನ್ಯವಾಗಿ ಈ ಜೀವನ ಪ್ರಮಾಣ ಪತ್ರ ಸಲ್ಲಿಸಲು ಬಯಸುವ ಪಿಂಚಣಿದಾರರು ದಾಖಲೆಗಳನ್ನು ಒದಗಿಸಲು ವೈಯಕ್ತಿಕವಾಗಿ ಬ್ಯಾಂಕ್​ಗಳ ಮುಂದೆ ಹಾಜರಿರಬೇಕಿತ್ತು. ಆದರೆ ಕಳೆದ ವರ್ಷದ ಕೋವಿಡ್​ 19 ಅಪಾಯದ ಹಿನ್ನೆಲೆಯಲ್ಲಿ ಡಿಜಿಟಲ್​ ಲೈಫ್​ ಸರ್ಟಿಫಿಕೇಟ್​ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ

ಹಾಗಾದರೆ ಆನ್​ಲೈನ್​ ಮೂಲಕ ಜೀವನ ಪ್ರಮಾಣ ಪತ್ರವನ್ನು ಹೇಗೆ ಸಲ್ಲಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ :

https://jeevanpramaan.gov.in/ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ. ಅಥವಾ ಅಪ್ಲಿಕೇಶನ್​ ಸಹಾಯದಿಂದಲೂ ನೀವು ಈ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದು. ಇದಕ್ಕಾಗಿ ನೀವು ಮೊದಲು ಜೀವನ್ ಪ್ರಮಾಣ ಮೊಬೈಲ್​ ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡಬೇಕು. ಅರ್ಜಿದಾರರು ಆಧಾರ್​ ಸಂಖ್ಯೆ, ಪಿಂಚಣಿ ಪಾವತಿ ಆದೇಶ, ಬ್ಯಾಂಕ್​ ಖಾತೆ ಸಂಖ್ಯೆ, ಬ್ಯಾಂಕ್​ ಹೆಸರು ಹಾಗೂ ಮೊಬೈಲ್​ ಸಂಖ್ಯೆಯನ್ನು ಸಲ್ಲಿಸಬೇಕು. ಗುರುತಿಗಾಗಿ ಅರ್ಜಿದಾರ ವ್ಯಕ್ತಿಯು ಬಯೋಮೆಟ್ರಿಕ್​ ದೃಢೀಕರಣ ನೀಡಬೇಕು. ದೃಢೀಕರಣ ಯಶಸ್ವಿಯಾದ ಬಳಿಕ ಜೀವನ ಪ್ರಮಾಣ ಪತ್ರ ಪೋರ್ಟಲ್​ ನಿಮ್ಮ ರಿಜಿಸ್ಟರ್ಡ್​ ಮೊಬೈಲ್​ ಸಂಖ್ಯೆಗೆ ಎಸ್​ಎಂಎಸ್​ನ್ನು ಕಳುಹಿಸಲಿದೆ. ಇದರಲ್ಲಿ ಲೈಫ್​ ಸರ್ಟಿಫಿಕೇಟ್​ ಐಡಿ ಕೂಡ ಇರಲಿದೆ. ಈ ಐಡಿಯನ್ನು ನೀಡುವ ಮೂಲಕ ಲೈಫ್​ ಸರ್ಟಿಫಿಕೇಟ್​ನ್ನು ನೋಡಬಹುದಾಗಿದೆ.

ಡೋರ್​ಸ್ಟೆಪ್​ ಬ್ಯಾಂಕಿಂಗ್​​ ಅಪ್ಲಿಕೇಶನ್​ ಮೂಲಕವೂ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪಿಂಚಣಿದಾರರು ಡೋರ್​ಸ್ಟೆಪ್​ ಬ್ಯಾಂಕಿಂಗ್​ ಅಪ್ಲಿಕೇಶನ್​ನ್ನು ಗೂಗಲ್ ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್​ ಮಾಡಬೇಕು. ಅಥವಾ https://doorstepbanks.com/ ಗೂ ಭೇಟಿ ನೀಡಬಹುದಾಗಿದೆ. ಇದಾದ ಬಳಿಕ ಪಿಂಚಣಿ ಖಾತೆ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ಪಿಂಚಣಿದಾರರಿಗೆ ಒಂದು ಮೆಸೇಜ್​ ಬರಲಿದೆ ಇಲ್ಲಿ. ಯಾವ ಬ್ಯಾಂಕ್ ಏಜೆಂಟ್​ ನಿಮ್ಮ ಮನೆಗೆ ಬಂದು ಈ ಕಾರ್ಯವನ್ನು ಮಾಡಿಕೊಡಲಿದ್ದಾರೆ ಎಂಬುದರ ವಿವರಣೆ ಇರಲಿದೆ. ಬ್ಯಾಂಕಿಂಗ್​​ ಏಜೆಂಟ್​ ಪಿಂಚಣಿದಾರರ ಮನೆಗೆ ಬಂದ ಬಳಿಕ ಮುಂದಿನ ಕೆಲಸವನ್ನು ಮಾಡಲಾಗುತ್ತದೆ.

ಥಟ್ಟಂತ ರೆಡಿಯಾಗುತ್ತೆ ರುಚಿ ರುಚಿ ಬೆಳ್ಳುಳ್ಳಿ ಚಟ್ನಿ

ಈ ಕಾರ್ಯ ವಿಧಾನವನ್ನು ಸುಲಭಗೊಳಿಸಲು, ಅಂಚೆ ಇಲಾಖೆ ಕೂಡ ಮನೆ ಬಾಗಿಲಿಗೆ ಸೇವೆ ಒದಗಿಸಿದೆ. ಪಿಂಚಣಿದಾದರರು ಪೋಸ್ಟ್​ಇನ್​ಫೋ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಬೇಕು. ಇದೊಂದು ಶುಲ್ಕ ಸಹಿತ ಸೇವೆಯಾಗಿದೆ. ಹಾಗೂ ಇದು ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...