alex Certify ‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜೀವನ ಪ್ರಮಾಣ ಪತ್ರವನ್ನು ಈ ವರ್ಷ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಿಂಚಣಿದಾರರು ಈ ವಿಚಾರವನ್ನು ಗಮದಲ್ಲಿಟ್ಟುಕೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಡಿಸೆಂಬರ್‌ನಿಂದ ಪಿಂಚಣಿ ವಿತರಣೆ ನಿಲ್ಲಲಿದೆ.

ಪಿಂಚಣಿದಾರರ ಬಳಿ ಇರಬಹುದಾದ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದಾದ ಜೀವನ ಪ್ರಮಾಣ ಪತ್ರವು, ಬ್ಯಾಂಕುಗಳು, ಅಂಚೆ ಕಚೇರಿಗಳು ಹಾಗೂ ಇತರೆ ಪಿಂಚಣಿ ವಿತರಣಾ ಪ್ರಾಧಿಕಾರಗಳಿಂದ (ಪಿಡಿಎ) ಮಾಸಿಕ ಪಿಂಚಣಿ ಪಡೆಯಲು ಅತ್ಯವಶ್ಯವಾಗಿದೆ.

ಈ ವರ್ಷದ ಜೀವನ ಪ್ರಮಾಣ ಪತ್ರವನ್ನು ಸಂಬಂಧಿಸಿದ ಪಿಡಿಎಗಳಿಗೆ ನವೆಂಬರ್‌ 30ರ ಒಳಗೆ ಪಿಂಚಣಿದಾರರು ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರ ಸೂಚಿಸಿದ ಫಾರ್ಮಟ್‌ಗಳಲ್ಲಿರುವ ದಾಖಲೆಗಳನ್ನು ಸಹಿ ಮಾಡಿ ಸಲ್ಲಿಸಬೇಕಾಗುತ್ತದೆ.

ಕೃಷಿ ಕಾಯ್ದೆ ವಿರುದ್ಧ ಮತ್ತೆ ಬೀದಿಗಿಳಿದ ಅನ್ನದಾತ; ರಾಜ್ಯದ ಹಲವೆಡೆ ರಸ್ತೆ ತಡೆ; ಬಾರುಕೋಲು ಚಳುವಳಿ ನಡೆಸಿ ಆಕ್ರೋಶ

ಸಾಮಾನ್ಯವಾಗಿ, ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಿಗೆ ಭೇಟಿ ಕೊಟ್ಟು ಜೀವನ ಪ್ರಮಾಣ ಪತ್ರವನ್ನು ಪಿಂಚಣಿದಾರರು ಸಲ್ಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್‌ ಆಗಿ ಸಲ್ಲಿಸಬಹುದಾಗಿದ್ದು, ಈ ಕೆಲಸಕ್ಕೆಂದು ಹಿರಿಯ ನಾಗರಿಕರು ಪಿಡಿಎಗಳ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯ ತಪ್ಪಿದೆ.

ಆಧಾರ್‌ ಸಂಖ್ಯೆಯೊಂದಿಗೆ, ಸಕ್ರಿಯವಾದ ಮೊಬೈಲ್ ಸಂಖ್ಯೆಗಳು ಇದ್ದಲ್ಲಿ, ಜೀವನ ಪ್ರಮಾಣ ಅಪ್ಲಿಕೇಶನ್‌ಗೆ ನೋಂದಾಯಿತರಾಗಿ, ಈ ಪ್ರಮಾಣ ಪತ್ರವನ್ನು ಆನ್ಲೈನ್‌ನಲ್ಲೇ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್ ಇದ್ದಲ್ಲಿ ಸರ್ಕಾರದ ಜೀವನ ಪ್ರಮಾಣ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ಓಟಿಪಿ ಮೂಲಕ ನೋಂದಣಿಯಾಗಿ, ಮತ್ತೊಮ್ಮೆ ನಿಮ್ಮ ನೋಂದಾಯಿತ ಸಂಖ್ಯೆಗೆ ಬರುವ ಓಟಿಪಿ ಮುಖಾಂತರ ಜೀವನ ಪ್ರಮಾಣ ಪತ್ರವನ್ನು ಸರಳವಾಗಿ ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...