alex Certify ಪತ್ನಿಯ ಅಪೇಕ್ಷೆಯಂತೆ ವಾಕಿಂಗ್, ಸಿನಿಮಾ ನೋಡಲು ರಜೆ ಕೋರಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಅಪೇಕ್ಷೆಯಂತೆ ವಾಕಿಂಗ್, ಸಿನಿಮಾ ನೋಡಲು ರಜೆ ಕೋರಿದ ಪೊಲೀಸ್

ಬೆಂಗಳೂರು: ಒಂದು ದಿನದ ಮಟ್ಟಿಗೆ ತನ್ನೊಂದಿಗೆ ವಾಯುವಿಹಾರ ಮಾಡಲು ಮತ್ತು ಸಿನಿಮಾ ನೋಡಲು ಪತ್ನಿ ಅಪೇಕ್ಷೆಪಟ್ಟಿದ್ದು, ಆಕೆಯ ಆಸೆಯನ್ನು ನೆರವೇರಿಸಲು ರಜೆ ಕೊಡಬೇಕೆಂದು ಪೊಲೀಸ್ ಕಾನ್ಸ್ಟೇಬಲ್ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಸಿಸಿಬಿ ಮಾದಕವಸ್ತು ನಿಗ್ರಹದಳದ ಹೆಡ್ ಕಾನ್ಸ್ಟೇಬಲ್ ಆನಂದ್ ಅವರು ಒಂದು ದಿನದ ರಜೆ ಕೋರಿ ಮನವಿ ಮಾಡಿದ್ದು, ಅವರಿಗೆ ಇನ್ಸ್ ಪೆಕ್ಟರ್ ರಜೆ ಮಂಜೂರು ಮಾಡಿದ್ದಾರೆ. ಆನಂದ್ ಅವರು ರಜೆ ಕೋರಿದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಸರಿಯಾಗಿ ರಜೆ ಸಿಗುತ್ತಿಲ್ಲ. ರಜೆ ಪಡೆಯುವುದೇ ದೊಡ್ಡ ಸವಾಲಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ವಾಕಿಂಗ್ ಹೋಗಲು. ಥಿಯೇಟರ್ ನಲ್ಲಿ ಸಿನಿಮಾ ನೋಡಲು ಪತ್ನಿ ಅಪೇಕ್ಷೆ ಪಟ್ಟಿದ್ದು, ಅದನ್ನು ನೆರವೇರಿಸಲು ಒಂದು ದಿನದ ವಾರದ ರಜೆ ನೀಡಬೇಕೆಂದು ಆನಂದ್ ಪತ್ರದಲ್ಲಿ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...