alex Certify ಮನೆಯಲ್ಲಿ ನೆಮ್ಮದಿ – ಶಾಂತಿ ನೆಲೆಸಲು ʼವಾಸ್ತುಶಾಸ್ತ್ರʼದ ಪ್ರಕಾರ ಹೀಗಿರಲಿ ನಿಮ್ಮ ಅಡುಗೆ ಕೋಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ನೆಮ್ಮದಿ – ಶಾಂತಿ ನೆಲೆಸಲು ʼವಾಸ್ತುಶಾಸ್ತ್ರʼದ ಪ್ರಕಾರ ಹೀಗಿರಲಿ ನಿಮ್ಮ ಅಡುಗೆ ಕೋಣೆ

ಅಡುಗೆ ಮನೆಯನ್ನ ವಾಸ್ತುವಿನ ಪ್ರಕಾರ  ನಿರ್ಮಾಣ ಮಾಡೋದು ಅತ್ಯಂತ ಅವಶ್ಯವಾಗಿದೆ. ಒಂದು ವೇಳೆ ನೀವು ಅಡುಗೆ ಮನೆಯನ್ನ ವಾಸ್ತು ಪ್ರಕಾರ ನಿರ್ಮಾಣ ಮಾಡಿಲ್ಲ ಎಂದಾದಲ್ಲಿ ಮನೆಯಲ್ಲಿ ನೆಮ್ಮದಿ – ಶಾಂತಿ ನೆಲೆಸೋದು ಅಸಾಧ್ಯ.

ಇದು ಮಾತ್ರವಲ್ಲದೇ ಮನೆಯ ಸದಸ್ಯರ ಆರೋಗ್ಯ ಕೂಡ ಕೆಡುವ ಸಾಧ್ಯತೆ ಇದೆ. ಇದು ಮಾತ್ರವಲ್ಲದೇ ಮನೆಯ ಏಳ್ಗೆಯೇ ನಾಶವಾಗುವ ಅಪಾಯ ಕೂಡ ಇರುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಅಡುಗೆ ಕೋಣೆಯು ಆಗ್ನೇಯ ದಿಕ್ಕಿನಲ್ಲೇ ಇರಬೇಕು. ಅದೇ ರೀತಿ ಅಡುಗೆ ಮನೆಯಲ್ಲಿ ನೀರು ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

ನೀರು ಹಾಗೂ ಅಗ್ನಿ ಮೂಲೆ ಒಂದೇ ಕಡೆ ಇರಬಾರದು. ನೀರು ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಅಗ್ನಿಯು ಆಗ್ನೇಯ ದಿಕ್ಕಿನಲ್ಲೇ ಇರಬೇಕು. ಇನ್ನು ಊಟ ಮಾಡುವ ಸಮಯದಲ್ಲಿ  ನಿಮ್ಮ ಮುಖ ಈಶಾನ್ಯದ ಕಡೆ ಇರಲಿ. ಮೈಕ್ರೋವೇವ್​, ಮಿಕ್ಸರ್​ ಸೇರಿದಂತೆ ವಿವಿಧ ಸಾಮಗ್ರಿಗಳು ಆಗ್ನೇಯದಲ್ಲಿ ಇದ್ದರೆ ಫ್ರಿಡ್ಜ್​​ನ್ನು ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಇನ್ನು ಕಸದ ಬುಟ್ಟಿಯನ್ನ ಎಂದಿಗೂ ಅಡುಗೆ ಮನೆಯಿಂದ ಹೊರಗಡೆಯೇ ಇಡಿ.

ಅಡುಗೆ ಮನೆಯಲ್ಲಿ ಎಂದಿಗೂ ಗಾಳಿ – ಬೆಳಕು ಬರಲು ಮುಕ್ತ ಅವಕಾಶ ಇರುವಂತೆ ನೋಡಿಕೊಳ್ಳಿ. ಅಡುಗೆ ಮನೆಯ ಗೋಡೆ ಬಣ್ಣವು ಕೇಸರಿ, ಹಳದಿ ಹಾಗೂ ನೀಲಿ ಬಣ್ಣದಲ್ಲಿ ಇರದಂತೆ ನೋಡಿಕೊಳ್ಳಿ. ಪೂರ್ವ ಭಾಗದಲ್ಲಿ ಕಿಟಕಿ ಹಾಗೂ ಈಶಾನ್ಯ ದಿಕ್ಕಿನಲ್ಲಿ ನೀರನ್ನ ಇಡಿ. ಅಡುಗೆ ಮನೆಯ ಸಮೀಪದಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳು ಇಲ್ಲದಂತೆ ನೋಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...