alex Certify ಅಚ್ಚರಿಯಾದರೂ ನಿಜ…! ಬ್ಯಾಂಕ್‌ ನಲ್ಲಿದ್ದ ತನ್ನದೇ ಹಣ ಪಡೆಯಲು ಗನ್‌ ಹಿಡಿದು ಬಂದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ನಿಜ…! ಬ್ಯಾಂಕ್‌ ನಲ್ಲಿದ್ದ ತನ್ನದೇ ಹಣ ಪಡೆಯಲು ಗನ್‌ ಹಿಡಿದು ಬಂದ ಭೂಪ

ಲೆಬನಾನ್​ ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಿರುವಾಗ ಕಳೆದ ವಾರ ವ್ಯಕ್ತಿಯೊಬ್ಬ ಲೆಬನಾನ್​ನ ಬೈರುತ್​ನಲ್ಲಿ ಬ್ಯಾಂಕ್​ನೊಳಗೆ ಬ್ಯಾಂಕ್​ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ ಉಳಿತಾಯವನ್ನು ಪಡೆಯಲು ಪ್ರಯತ್ನ ಮಾಡಿದ್ದಾನೆ. ಆತನ ಸಾಹಸಕ್ಕೆ ಅಲ್ಲಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬಸ್ಸಾಮ್​ ಅಸ್​-ಶೇಖ್​ ಹುಸೇನ್​ ಬೈರುತ್​ನಲ್ಲಿ ಫುಡ್​ ಡೆಲವರಿ ಚಾಲಕರಾಗಿ ಕೆಲಸ ಮಾಡುತ್ತಾನೆ. ಕಳೆದ ಗುರುವಾರ ಶಾಟ್​ಗನ್​ನೊಂದಿಗೆ ಬ್ಯಾಂಕ್​ ಪ್ರವೇಶಿಸಿ, 10 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ.

ತನ್ನ ತಂದೆಯ ವೈದ್ಯಕಿಯ ಬಿಲ್​ಗಳನ್ನು ಪಾವತಿಸಲು ಬ್ಯಾಂಕಿನಲ್ಲಿ ಉಳಿದಿದ್ದ ಉಳಿತಾಯದ ಹಣ ಪಡೆಯಲು ಈ ರೀತಿ ಮಾಡಿದ್ದ. ಆತ ಮೂರು ಗುಂಡುಗಳನ್ನು ಹಾರಿಸಿ ಎಚ್ಚರಿಸಿದ್ದ. ಮತ್ತು ಬ್ಯಾಂಕಿಗೆ ಬೀಗ ಹಾಕಿ ತನ್ನ ಉಳಿತಾಯದ ಹಣ ಕೊಡದೇ ಇದ್ದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ.

ಅವನು ಅಂತಿಮವಾಗಿ ತನ್ನ 35,000 ಡಾಲರ್​ (28 ಲಕ್ಷ ರೂ.) ಪಡೆದುಕೊಳ್ಳುವ ಬದಲು ಶರಣಾಗಿದ್ದು, ಕೊನೆಗೆ ಬಂಧಿಸಲ್ಪಟ್ಟಿದ್ದಾನೆ. ಲೆಬನಾನ್​ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, 2019 ರಲ್ಲಿ ಅಲ್ಲಿನ ಪರಿಸ್ಥಿತಿ ಬಿಡಗಾಯಿಸಲು ಪ್ರಾರಂಭವಾಯಿತು. ಸಾರ್ವಜನಿಕರ ವಿದೇಶಿ ಕರೆನ್ಸಿ ಉಳಿತಾಯದ ಹಿಂಪಡೆಯುವಿಕೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಲಾಗಿದೆ.

ಒತ್ತೆಯಾಳು ಪರಿಸ್ಥಿತಿಯನ್ನು ವ್ಯವಹರಿಸುವಾಗ ಬಸ್ಸಮ್​ ಅವರ ಪತ್ನಿ ಬ್ಯಾಂಕಿನ ಹೊರಗಿದ್ದರು. ಅವನು ಏನು ಮಾಡಬೇಕೋ ಅದನ್ನು ಅವನು ಮಾಡಿದ್ದಾನೆ ಎಂದು ಅವರು ಹೇಳಿದರು.

ಈ ವೇಳೆ ಜನಸಮೂಹವು ಬ್ಯಾಂಕ್​ನ ಹೊರಗೆ ಜಮಾಯಿಸಲು ಪ್ರಾರಂಭಿಸಿತು. ಸರ್ಕಾರದ ವಿರುದ್ಧ ಪ್ರತಿಭಟಿಸುವಾಗ “ನೀವು ಒಬ್ಬ ವೀರ” ಎಂದು ಘೋಷಣೆಗಳನ್ನು ಕೂಗಿದರು. ಜನರು ಸಾಮಾಜಿಕ ಜಾಲತಾಣದಲ್ಲಿ ಬಸ್ಸಮ್​ನನ್ನು ಶ್ಲಾಘಿಸಿದ್ದಾರೆ. ಬಸ್ಸಮ್​ ವಿರುದ್ಧದ ಆರೋಪಗಳನ್ನು ಬ್ಯಾಂಕ್​ ಕೈಬಿಟ್ಟ ನಂತರ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...