alex Certify | BIG NEWS:‌ ʼಡ್ರೋನ್​ʼ ಮೂಲಕ ಭಯೋತ್ಪಾದಕರನ್ನು ಭಾರತದ ನೆಲದಲ್ಲಿ ಇಳಿಸುತ್ತಿದೆ ಲಷ್ಕರ್​ ಎ ತೋಯ್ಬಾ…! ಶಾಕಿಂಗ್‌ ವಿಡಿಯೋ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

| BIG NEWS:‌ ʼಡ್ರೋನ್​ʼ ಮೂಲಕ ಭಯೋತ್ಪಾದಕರನ್ನು ಭಾರತದ ನೆಲದಲ್ಲಿ ಇಳಿಸುತ್ತಿದೆ ಲಷ್ಕರ್​ ಎ ತೋಯ್ಬಾ…! ಶಾಕಿಂಗ್‌ ವಿಡಿಯೋ ಬಹಿರಂಗ

ಕುಖ್ಯಾತ ಭಯೋತ್ಪಾದಕ ಗುಂಪಾದ ಲಷ್ಕರ್​ -ಎ – ತೊಯ್ಬಾ ಡ್ರೋನ್​ಗಳ ಮೂಲಕ ಭಯೋತ್ಪಾದಕರನ್ನು ಭಾರತದ ಒಳಗೆ ಇಳಿಸುವ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ. ಈ ಡ್ರೋನ್​ಗಳು 70 ಕೆಜಿವರೆಗೆ ಪೇಲೋಡ್​ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದು ಬಂದಿದೆ.

ಪಂಜಾಬ್​ ಹಾಗೂ ಜಮ್ಮು & ಕಾಶ್ಮೀರದ ಗಡಿಯಲ್ಲಿ ಶೂಟ್​ ಮಾಡಲಾದ ವಿಡಿಯೋದಲ್ಲಿ ಭಯೋತ್ಪಾದಕರು ಡ್ರೋನ್​ಗಳ ಸಾಮರ್ಥ್ಯ ಪರೀಕ್ಷೆ ಮಾಡುತ್ತಿರೋದು ಹಾಗೂ ಮನುಷ್ಯರನ್ನು ಡ್ರೋನ್​ಗಳ ಮೇಲೆ ಕೂರಿಸಿ ಅವರನ್ನ ನೀರಿನಲ್ಲಿ ಬಿಡುತ್ತಿರೋದನ್ನ ಕಾಣಬಹುದಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಇದೇ ಡ್ರೋನ್​ಗಳನ್ನು ಬಳಕೆ ಮಾಡಿ ಭಯೋತ್ಪಾದಕರನ್ನು ಪಂಜಾಬ್​ಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಈ ಭಯೋತ್ಪಾದಕ ಗುಂಪು ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ನಾರ್ಕೋ ಸರಕುಗಳನ್ನು ಜಮ್ಮು & ಕಾಶ್ಮೀರ ಹಾಗೂ ಪಂಜಾಬ್​​ಗೆ ಡ್ರೋನ್​ ಮೂಲಕ ಸಾಗಿಸುತ್ತಿದೆ. ರಾಜಸ್ಥಾನ ಹಾಗೂ ಗುಜರಾತ್​ ಗಡಿಗಳನ್ನು ಬಳಕೆ ಮಾಡಿಕೊಂಡು ರಸ್ತೆ ಮಾರ್ಗದ ಮೂಲಕ ಪಂಜಾಬ್​​ಗೆ ಈ ಸರಕುಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ವರದಿಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...