alex Certify ಡಾರ್ಜೆಲಿಂಗ್​​ನಲ್ಲಿ ಭಾರೀ ಭೂ ಕುಸಿತ: ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾರ್ಜೆಲಿಂಗ್​​ನಲ್ಲಿ ಭಾರೀ ಭೂ ಕುಸಿತ: ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಪಶ್ಚಿಮ ಬಂಗಾಳದ ಡಾರ್ಜೆಲಿಂಗ್​​ನಲ್ಲಿ ಶುಕ್ರವಾರ ನಡೆದ ಭೂಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗವೇ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 40 ಮೀಟರ್​​ ದೂರದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆ ತಿಂಡಾರಿಯಾ ಬಳಿಯ ಗೈರಿಗಾಂವ್​​ ಪ್ರದೇಶವು ಸಂಪೂರ್ಣ ಕೊಚ್ಚಿ ಹೋಗಿದೆ.

ಈ ಭೂಕುಸಿತದಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸಿಲಿಗುರಿ ಹಾಗೂ ಡಾರ್ಜೆಲಿಂಗ್​ ನಡುವಿನ ರಸ್ತೆ ಸಂಪರ್ಕವನ್ನ ಕಡಿತಗೊಳಿಸಲಾಗಿತ್ತು. ಹಾಗಂತ ಡಾರ್ಜೆಲಿಂಗ್​ಗೆ ರಸ್ತೆ ಮಾರ್ಗ ಸಂಪೂರ್ಣ ಬಂದ್​ ಆಗಲಿಲ್ಲ. ರೋಹಿಣಿ ಮಾರ್ಗವಾಗಿ ಡಾರ್ಜೆಲಿಂಗ್​ಗೆ ಸಂಚಾರ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...