alex Certify ಕುತೂಹಲಕ್ಕೆ ಕಾರಣವಾಗಿದೆ ಈ ಕೆರೆ ಹಿಂದಿನ ʼಕತೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಈ ಕೆರೆ ಹಿಂದಿನ ʼಕತೆʼ

ಕೇವಲ 1.8 ಕಿ.ಮೀ ಉದ್ದ ಹಾಗೂ 400 ಮೀ. ಅಗಲವಾದ ಸರೋವರವೊಂದು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಭಾರಿ ಅಚ್ಚರಿ ಮತ್ತು ಭಯಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಸರೋವರಕ್ಕೆ ಇಳಿದವರು ಯಾರೂ ಕೂಡ ಮೇಲಕ್ಕೆದ್ದು ಬಂದಿಲ್ಲ ! ಹೌದು, ಇದು ಭಾರತದ ಪಾಲಿನ ಬರ್ಮುಡಾ ಟ್ರೈಯಾಂಗಲ್‌.

ಈ ಕೆರೆಗೆ ಥಾಯ್‌ ಭಾಷೆಯಲ್ಲಿ’ ನಾಯುಂಗ್‌ ಯಾಂಗ್‌’ ಎನ್ನಲಾಗುತ್ತದೆ. ಅಂದರೆ ‘ಲೇಕ್‌ ಆಫ್‌ ನೋ ರಿಟರ್ನ್‌’. ಭಾರತ ಮ್ಯಾನ್ಮಾರ್‌ ಗಡಿಯಲ್ಲಿನ ಪಟ್ಟಣವೊಂದರಲ್ಲಿ ಈ ಕೆರೆ ಇದ್ದು, ಇದರ ಬಗ್ಗೆ ಜಾನಪದ ಕತೆಯೊಂದು ವಿಶೇಷವಾಗಿ ಪ್ರಚಲಿತದಲ್ಲಿದೆ.

ಬಾಯಲ್ಲಿ ಕುಂಚ ಹಿಡಿದು ಬಿಡಿಸಿದ ಸಿಎಂ ಕಲಾಕೃತಿ; ಕಲಾವಿದನ ಕೌಶಲ್ಯಕ್ಕೆ ಬೆರಗಾದ ಬೊಮ್ಮಾಯಿ

ಇಸ್ರೇಲ್‌ನಿಂದ ಸದ್ಯ ವಿನಾಶಗೊಂಡಿರುವ ಬುಡಕಟ್ಟು ಸಮುದಾಯವೊಂದು, ವಿಶಿಷ್ಟ ಶಕ್ತಿಗಳ ನೆರವಿನಿಂದ ಈ ಕೆರೆಯಲ್ಲಿ ಮುಳುಗಿಕೊಂಡು ಇದೆಯಂತೆ. ಜಗತ್ತಿನಿಂದ ಅಂತರ ಕಾಯ್ದುಕೊಳ್ಳಲು ಅವರು ಕೆರೆಗೆ ಇಳಿಯುವ ಯಾರನ್ನೂ ಜೀವಂತವಾಗಿ ಉಳಿಸಲ್ಲ ಎನ್ನುತ್ತದೆ ಜನಪದ ಕತೆ.

ಆದರೆ, ಸ್ಥಳೀಯರ ಪ್ರಕಾರ, ಕೇವಲ ಪ್ರವಾಸಿಗರನ್ನು ಹೆಚ್ಚೆಚ್ಚು ಸೆಳೆಯಲು ಇಂಥ ಕಟ್ಟುಕತೆಗಳನ್ನು ಸೃಷ್ಟಿಸಲಾಗಿದೆಯಂತೆ. ಅಂಟಾರ್ಟಿಕಾದಲ್ಲಿ ಐಸ್‌ನಿಂದ ಪೂರ್ಣವಾಗಿ ಮುಚ್ಚಲಾಗಿದ್ದ ಕೆರೆಯೊಂದು ವರ್ಷಗಳಿಂದ ಹಾಗೆಯೇ ಇದ್ದು, ಕೊನೆಗೆ ಒಂದೇ ವಾರದಲ್ಲಿ ಸಾಗರದಲ್ಲಿ ಕರಗಿ ಮಾಯವಾಗಿ ಹೋಗಿದ್ದು ಕೂಡ ಇತ್ತೀಚೆಗೆ ವರದಿಯಾಗಿತ್ತು. ಸುಮ್ಮನೆ ಮುಳುಗಲು ಈ ಕೆರೆ ಸಣ್ಣದ್ದಲ್ಲ. ಬರೋಬ್ಬರಿ 63000 ಕೋಟಿ ಚದರ ಅಡಿಗಳಷ್ಟಿತ್ತು.

ಒಟ್ಟಿನಲ್ಲಂತೂ ಈ ಸರೋವರ ಅಚ್ಚರಿ ಹುಟ್ಟಿಸಿದ್ದು, ಇದರೊಳಗಿನ ಕೌತುಕ ಜನರ ಗಮನ ಸೆಳೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...