alex Certify ಮೀನು ಹಿಡಿಯಲು ಹೋದಾಗಲೇ ದುರಂತ: ಇಬ್ಬರು ನೀರು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯಲು ಹೋದಾಗಲೇ ದುರಂತ: ಇಬ್ಬರು ನೀರು ಪಾಲು

ಚಿಕ್ಕಮಗಳೂರು: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಹೊರವಲಯದ ಹ್ಯಾಂಡ್ ಪೋಸ್ಟ್ ಸಮೀಪ ಘಟನೆ ನಡೆದಿದೆ.

ತನ್ಮಯ್(20), ಕಿಶೋರ್(12) ಮೃತಪಟ್ಟವರು ಎಂದು ಹೇಳಲಾಗಿದೆ. ಮೂವರು ಬಾಲಕರು ಮೀನು ಹಿಡಿಯಲು ಹೋದಾಗ ಘಟನೆ ನಡೆದಿದ್ದು, ಒಬ್ಬ ಬಾಲಕ ಪಾರಾಗಿದ್ದಾನೆ. ಮೃತರು ಕೊಪ್ಪ ತಾಲೂಕು ಬಸರಿಕಟ್ಟೆ ಮೂಲದವರು ಎಂದು ಹೇಳಲಾಗಿದೆ. ಸ್ಥಳೀಯ ಈಜುಗಾರರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...