alex Certify ಕೆರೆಯಲ್ಲಿತ್ತು ಮೃತದೇಹ, ಪಕ್ಕದಲ್ಲೇ ನಿಂಬೆಹಣ್ಣು: ವಾಮಾಚಾರ ಮಾಡಿ ಬಾಲಕನ ಕೊಲೆ ಶಂಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಯಲ್ಲಿತ್ತು ಮೃತದೇಹ, ಪಕ್ಕದಲ್ಲೇ ನಿಂಬೆಹಣ್ಣು: ವಾಮಾಚಾರ ಮಾಡಿ ಬಾಲಕನ ಕೊಲೆ ಶಂಕೆ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದ ಬಳಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ.

ಮಹೇಶ್ ಅಲಿಯಾಸ್ ಮನು(16) ಮೃತದೇಹ ಪತ್ತೆಯಾಗಿದೆ. ಮಹೇಶನ ಮೂವರು ಅಪ್ರಾಪ್ತ ಸ್ನೇಹಿತರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ವಾಮಾಚಾರ ಮಾಡಿ ಮಹೇಶನನ್ನು ಕೆರೆಗೆ ತಳ್ಳಿರುವ ಆರೋಪ ಕೇಳಿಬಂದಿದ್ದು, ಕೆರೆಯಲ್ಲಿ ಮೃತದೇಹದ ಬಳಿ ನಿಂಬೆಹಣ್ಣು ಇತರೆ ವಸ್ತುಗಳು ಕಂಡುಬಂದಿವೆ ಎನ್ನಲಾಗಿದ್ದು, ಮೂವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...