ಯುವಕರ ಕ್ರೇಜ್ ಕೆಟಿಎಂ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದೆ. ಇದೀಗ ಭಾರತದಲ್ಲಿ ಕೆಟಿಎಂ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸಲು ಕಂಪನಿಯು ಕೆಟಿಎಂ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಇದು ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ವಾಹನ ಮಾಲೀಕರಿಗೆ ವೈಯಕ್ತಿಕ ಸವಾರಿಗಳನ್ನು ರೆಕಾರ್ಡ್ ಮಾಡಲು ಮತ್ತು ಟ್ರ್ಯಾಕ್ ಮಾಡಲು, ಹೊಸ ಸವಾರಿಗಳನ್ನು ರಚಿಸಲು ಮತ್ತು ಕೆಟಿಎಂನೊಂದಿಗೆ ಸಂಪರ್ಕಿಸಲು ಅನುಮತಿಸುತ್ತದೆ.
ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ
ಬಜಾಜ್ ಆಟೋ ( ಪ್ರೋಬೈಕಿಂಗ್) ಅಧ್ಯಕ್ಷ ಸುಮೀತ್ ನಾರಂಗ್ ಹೇಳುವಂತೆ, ಇದು ಕೆಟಿಎಂ ಜತೆಗಿನ ಅನುಭವ ವೃದ್ಧಿಸಲು ಹೊಸ ವಯಸ್ಸಿನ ಬೈಕರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ನಿಜಕ್ಕೂ ಈ ಅಪ್ಲಿಕೇಶನ್ ಕೆಟಿಎಂ ಮಾಲೀಕರ ಹೃದಯ ಗೆಲ್ಲುತ್ತದೆ ಹಾಗೂ ಹೊಸ ದೃಷ್ಟಿಕೋನದ ಬೈಕಿಂಗ್ ಫ್ಯಾಶನ್ ಇಷ್ಟಪಡುತ್ತಾರೆಂದು ಕಂಪನಿ ಭಾವಿಸಿದೆ.