alex Certify ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ. 2022 -23ನೇ ಸಾಲಿನ ಮಾರ್ಚ್ ಅಂತ್ಯದವರೆಗೆ ಬಸ್ ಪಾಸ್ ಪಡೆದುಕೊಂಡಿರುವ ಪದವಿ, ಸ್ನಾತಕೋತ್ತರ ಪದವಿ, ಬಿ ಫಾರ್ಮ್, ಡಿಪ್ಲೊಮಾ ಮೊದಲಾದ ಕೋರ್ಸುಗಳ ವಿದ್ಯಾರ್ಥಿಗಳಿಗೆ ಜುಲೈ ಅಂತ್ಯದವರೆಗೆ ಪರೀಕ್ಷೆಗಳು ಇರುವ ಕಾರಣ ಈ ವಿದ್ಯಾರ್ಥಿಗಳಿಗೆ ಮಾತ್ರ ಎರಡು ತಿಂಗಳ ಅವಧಿಗೆ ಬಸ್ ಪಾಸ್ ವಿಸ್ತರಿಸಿ ಪ್ರಯಾಣಿಸಲು ಕೆಎಸ್ಆರ್ಟಿಸಿ ಅವಕಾಶ ಕಲ್ಪಿಸಿದೆ.

ಕೆಲವು ವಿದ್ಯಾರ್ಥಿಗಳ ಪಾಸ್ ಗಳು ಏಪ್ರಿಲ್ 2023ರ ವರೆಗೆ ಚಾಲ್ತಿಯಲ್ಲಿತ್ತು. ಬಸ್ ಪಾಸ್ ಅವಧಿ ವಿಸ್ತರಿಸುವಂತೆ ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿದ್ದರು. ಈ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ ಖಚಿತಪಡಿಸಿಕೊಂಡು ನಿಯಮಾನಸಾರ ಹಣ ಪಾವತಿಸಿಕೊಂಡು ರಶೀದಿ ನೀಡಿ ಬಸ್ ಪಾಸ್ ಅವಧಿಯನ್ನು ವಿಶೇಷವಾಗಿ ಒಂದು ಅಥವಾ ಎರಡು ತಿಂಗಳ ಕಾಲ ವಿಸ್ತರಿಸಬೇಕು. ಈ ವಿದ್ಯಾರ್ಥಿಗಳು ಪ್ರಯಾಣಿಸುವಾಗ ಶುಲ್ಕ ಪಾವತಿ ರಶೀದಿ ಮತ್ತು 2022 -23ನೇ ಸಾಲಿನ ಬಸ್ ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...