alex Certify ಪ್ರವಾಸಿಗರಿಗೆ ಸಿಹಿ ಸುದ್ದಿ: KSRTC ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ದಸರಾ ಪ್ಯಾಕೇಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಸಿಹಿ ಸುದ್ದಿ: KSRTC ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ದಸರಾ ಪ್ಯಾಕೇಜ್

ಬೆಂಗಳೂರು: ಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರಿಗಾಗಿ ಕೆ.ಎಸ್.ಆರ್.ಟಿ.ಸಿ. ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಕಲ್ಪಿಸಿದೆ.

ಜಲದರ್ಶಿನಿ ಪ್ರವಾಸ ಪ್ಯಾಕೇಜ್ ನಲ್ಲಿ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾ ಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್.ಗೆ ಕರೆದೊಯ್ಯಲಾಗುವುದು.

ಗಿರಿದರ್ಶಿನಿ ಪ್ರವಾಸ ಪ್ಯಾಕೇಜ್ ನಲ್ಲಿ ಬಂಡೀಪುರ, ಗೋಪಾಲ ಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಲಾಗುವುದು,

ದೇವದರ್ಶಿನಿ ಪ್ರವಾಸ ಪ್ಯಾಕೇಜ್ ಹೆಸರಲ್ಲಿ ನಂಜನಗೂಡು, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಲಾಗುತ್ತದೆ,

ಇದರೊಂದಿಗೆ ಮೈಸೂರು ನಗರದ ದೀಪಾಲಂಕಾರ ದರ್ಶನ ಪ್ಯಾಕೇಜ್ ನಲ್ಲಿ ಬಸ್ ನಿಲ್ದಾಣದಿಂದ, ಅರಮನೆ ರಸ್ತೆ, ಕೇಂದ್ರೀಯ ಬಸ್ ನಿಲ್ದಾಣ, ಎಲ್ಐಸಿ ಸರ್ಕಲ್, ಬಂಬೂ ಬಜಾರ್, ರೈಲ್ವೆ ನಿಲ್ದಾಣ, ಜೆ.ಎಲ್.ಬಿ. ರಸ್ತೆ, ನಗರ ಬಸ್ ನಿಲ್ದಾಣದವರೆಗೆ ಪ್ರವಾಸ ಪ್ಯಾಕೇಜ್ ಇರಲಿದೆ.

ಐರಾವತ ಕ್ಲಬ್ ಕ್ಲಾಸ್ ಬಸ್ ನಲ್ಲಿ ಮಡಿಕೇರಿ ಪ್ಯಾಕೇಜ್ ನಲ್ಲಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾ ಸೀಟ್, ಅಬ್ಬಿ ಫಾಲ್ಸ್ ಗೆ ಕರೆದುಕೊಂಡು ಹೋಗಲಾಗುವುದು.

ಪ್ರವಾಸ ಪ್ಯಾಕೇಜ್ ಗಳು ಮೈಸೂರಿನಿಂದ ಹೊರಟು ಮೈಸೂರಿಗೆ ವಾಪಸ್ಸಾಗಲಿದೆ. ಅಕ್ಟೋಬರ್ 20 ರಿಂದ 26 ರವರೆಗೆ ಕೆಎಸ್ಆರ್ಟಿಸಿ ದಸರಾ ಪ್ರವಾಸ ಪ್ಯಾಕೇಜ್ ಇರಲಿದ್ದು, www.ksrtc.karnataka.gov.in ವೆಬ್ಸೈಟ್ ಗಮನಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...