alex Certify ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಇಂಧನ ಬೆಲೆ ಏರಿಕೆ ಹಿನ್ನಲೆ ಇಂದಿನಿಂದ ಬಸ್ ಪ್ರಯಾಣ ದರ ಪರಿಷ್ಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಇಂಧನ ಬೆಲೆ ಏರಿಕೆ ಹಿನ್ನಲೆ ಇಂದಿನಿಂದ ಬಸ್ ಪ್ರಯಾಣ ದರ ಪರಿಷ್ಕರಣೆ

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಇಂಧನ ಬೆಲೆ ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗಕ್ಕೆ ಸಂಬಂಧಿಸಿದಂತೆ ದಾವಣಗೆರೆ-ಚನ್ನಗಿರಿ, ದಾವಣಗೆರೆ-ಹೊಸದುರ್ಗ, ದಾವಣಗೆರೆ-ಜಗಳೂರು, ದಾವಣಗೆರೆ-ಹರಪನಹಳ್ಳಿ ಮಾರ್ಗವಾಗಿ ಪ್ರಯಾಣಿಸುವ ಬಸ್‍ಗಳ ಪ್ರಯಾಣ ದರವನ್ನು ಜು.5 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ.

ಅದರಂತೆ ದಾವಣಗೆರೆಯಿಂದ ಚನ್ನಗಿರಿಗೆ 65 ರೂ., ಹೊಸದುರ್ಗ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 80 ರೂ. ಹಾಗೂ ವೇಗದೂತ ಸಾರಿಗೆಗೆ 90 ರೂ., ಜಗಳೂರಿಗೆ 55 ರೂ., ಹರಪನಹಳ್ಳಿಗೆ 50 ರೂ.ಗಳ ಪ್ರಯಾಣ ದರವನ್ನು ನಿಗಧಿಪಡಿಸಿದ್ದು, ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...