alex Certify ‘ಪರಂ ಸುಂದರಿ’ ಹಾಡಿನಿಂದಾಗಿ ನನ್ನ ಜೀವನವೇ ಹಾಳಾಯ್ತು ಎಂದ ಅಭಿಮಾನಿ..! ಸಾರಿ ಕೇಳಿದ ನಟಿ ಕೃತಿ ಸನೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪರಂ ಸುಂದರಿ’ ಹಾಡಿನಿಂದಾಗಿ ನನ್ನ ಜೀವನವೇ ಹಾಳಾಯ್ತು ಎಂದ ಅಭಿಮಾನಿ..! ಸಾರಿ ಕೇಳಿದ ನಟಿ ಕೃತಿ ಸನೋನ್

ಬಾಲಿವುಡ್​ ನಟಿ ಕೃತಿ ಸನೋನ್ ​​ರ 7 ವರ್ಷಗಳ ವೃತ್ತಿಜೀವನದಲ್ಲಿ ಮಿಮಿ ಸಿನಿಮಾ ಒಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದರೆ ತಪ್ಪಾಗಲಾರದು. ಬಾಡಿಗೆ ತಾಯಿಯಾಗಿ ಅದ್ಭುತ ನಟನೆ ಮಾಡಿದ್ದ ಕೃತಿ ಸನೂನ್​​ ಪ್ರೇಕ್ಷಕರ ಹಾಗೂ ಸಿನಿಮಾ ವಿಮರ್ಶಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಈ ಸಿನಿಮಾದ ಪರಂ ಸುಂದರಿ ಹಾಡು ಕೂಡ ಸೋಶಿಯಲ್​ ಮೀಡಿಯಾದ ಧೂಳೆಬ್ಬಿಸಿದೆ. ಈ ಸಿನಿಮಾ ಹಾಡು ಇದೀಗ ಚರ್ಚಾ ವಿಷಯವಾಗಿದ್ದು ಅಭಿಮಾನಿಯೊಬ್ಬ ಪರಂ ಸುಂದರಿ ಹಾಡು ನನ್ನ ಜೀವನವನ್ನೇ ಹಾಳು ಮಾಡಿದೆ ಎಂದು ಹೇಳಿದ್ದಾರೆ.

ಅಭಿಮಾನಿಯ ಈ ಆರೋಪಕ್ಕೆ ಕೃತಿ ಸನೂನ್​ ನಗುತ್ತಲೇ ಉತ್ತರಿಸಿದ್ದು ಈ ಸಂಭಾಷಣೆಯ ಸ್ಕ್ರೀನ್​ಶಾಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಪರಂ ಚಹ್ಯಾ ಎಂಬ ಹೆಸರಿನ ವ್ಯಕ್ತಿಯು ಟ್ವಿಟರ್​ನಲ್ಲಿ ಪರಂ ಸುಂದರಿ ಹಾಡಿನ ಬಗ್ಗೆ ಬರೆದಿದ್ದಾರೆ.

ಬಾಲ್ಯದಲ್ಲಿ ಅನೇಕರು ನನ್ನ ಹೆಸರನ್ನು ಆಡಿಕೊಂಡಾಗಲೂ ನನಗೆ ಏನೂ ಅನಿಸಿರಲಿಲ್ಲ. ಆದರೆ ಯಾವಾಗ ಕೃತಿ ಸನೂನ್​​ರ ಪರಂ ಸುಂದರಿ ಹಾಡು ರಿಲೀಸ್​ ಆಯ್ತೋ ಅಂದಿನಿಂದ ನನಗೆ ಇದೇ ಹಾಡನ್ನು ಹಾಡಿ ಸ್ನೇಹಿತರು ಕಾಲೆಳೆಯುತ್ತಿದ್ದಾರೆ. ಇದನ್ನು ಯಾಕೆ ಮಾಡಿದ್ರಿ ಕೃತಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ಫನ್ನಿಯಾಗಿ ಬರೆದಿದ್ದಾರೆ.

ಈ ಟ್ವೀಟ್​​ಗೆ ಸ್ವತಃ ಕೃತಿ ಸನೋನ್​ ಪ್ರತಿಕ್ರಿಯಿಸಿದ್ದ ಊಪ್ಸ್​…! ಸಾರಿ ಎನ್ನುವ ಮೂಲಕ ಕ್ಷಮೆಯಾಚಿಸಿದ್ದಾರೆ. ಇದು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...