alex Certify 3 ಹುದ್ದೆಗಳಿಗೆ ಒಂದೇ ದಿನ KPSC ಪರೀಕ್ಷೆ ನಿಗದಿ: ದಿನಾಂಕ ಬದಲಿಸಿ ಬೇರೆ ದಿನಗಳಲ್ಲಿ ಪರೀಕ್ಷೆ ನಡೆಸಲು ಸಿಎಂಗೆ ಸಚಿವ ಖರ್ಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಹುದ್ದೆಗಳಿಗೆ ಒಂದೇ ದಿನ KPSC ಪರೀಕ್ಷೆ ನಿಗದಿ: ದಿನಾಂಕ ಬದಲಿಸಿ ಬೇರೆ ದಿನಗಳಲ್ಲಿ ಪರೀಕ್ಷೆ ನಡೆಸಲು ಸಿಎಂಗೆ ಸಚಿವ ಖರ್ಗೆ ಮನವಿ

ಬೆಂಗಳೂರು: ಒಂದೇ ದಿನ ಕೆ.ಪಿ.ಎಸ್.ಸಿ. ವತಿಯಿಂದ ಮೂರು ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ದಿನಾಂಕ ಬದಲಾವಣೆ ಮಾಡುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ಒಂದೇ ದಿನ ಮೂರು ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳಲಾಗಿದೆ. ಮೂರು ಪರೀಕ್ಷೆ ಬರೆಯಲು ಅರ್ಜಿ ಹಾಕಿರುವ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಿರುವುದರಿಂದ ಮೂರು ಪರೀಕ್ಷೆಗಳನ್ನು ಬೇರೆ ದಿನಗಳಲ್ಲಿ ನಡೆಸುವಂತೆ ಆಯೋಗಕ್ಕೆ ಸೂಚಿಸುವಂತೆ ಸಿಎಂಗೆ ಕೋರಿದ್ದಾರೆ.

ಲೋಕಸೇವಾ ಆಯೋಗ ನವೆಂಬರ್ 5ರಂದು ಲೆಕ್ಕಪತ್ರ ಇಲಾಖೆಯ 242 ಲೆಕ್ಕ ಸಹಾಯಕರು, ಸಹಕಾರ ಸಂಘಗಳ 47 ನಿರೀಕ್ಷಕರು, ಪೊಲೀಸ್ ಇಲಾಖೆಯ 454 ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಿಗದಿಪಡಿಸಿದೆ. ಇದರಿಂದ ಪರೀಕ್ಷಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಕೆಲವರು ಮೂರು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಯಾವುದನ್ನು ಬರೆಯಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಾಗಿ ಬೇರೆ ದಿನಗಳಂದು ಪರೀಕ್ಷೆ ನಡೆಸಲು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...