alex Certify ‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ.

ಏ ಜವಾನಿ ಹೇ ದಿವಾನಿ ಚಿತ್ರದ ಜನಪ್ರಿಯ “ಗಾಘ್ರಾ…’ ಹಾಡಿಗೆ ಕೊರಿಯಾದ ವಿದ್ಯಾರ್ಥಿಗಳ ಗುಂಪೊಂದು ಸ್ಟೆಪ್​ ಹಾಕುವ ವಿಡಿಯೊ ಜಾಲತಾಣದಲ್ಲಿ ವೈರಲ್​ ಆಗಿದೆ.

ವರ್ಣರಂಜಿತ ಸಾಂಪ್ರದಾಯಿಕ ಧಿರಿಸು ತೊಟ್ಟಿದ್ದು ತಮ್ಮ ಶಾಲೆಯ ಮುಂಭಾಗದ ಫೋಡಿಯಂನಲ್ಲಿ ಹೆಜ್ಜೆ ಹಾಕಿದ್ದಾರೆ. ಲವಲವಿಕೆಯ ಆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿರುವುದು, ಸಂಯೋಜನೆ ಗಮನ ಸೆಳೆಯುತ್ತದೆ. ನೆಟ್ಟಿಗರು ನೂರಾರು ಸಂಖ್ಯೆಯಲ್ಲಿ ಕಾಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರದಲ್ಲಿ ರಣಬೀರ್​ ಕಪೂರ್​, ಮಾಧುರೀ ದೀಕ್ಷಿತ್​ ಹೆಜ್ಜೆ ಹಾಕಿರುವ ಈ ಹಾಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅದರು ತನ್ನ ವ್ಯಾಪ್ತಿಯನ್ನು ಭಾರತದಿಂದ ಹೊರಗೂ ಹರಡಿದೆ ಎಂಬುದಕ್ಕೆ ಈ ಶಾಲಾ ಮಕ್ಕಳ ನೃತ್ಯವೇ ಸಾಕ್ಷಿಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...