alex Certify ಪ್ರಿಯಕರನ ಮಾತಿಗೆ ಮಣಿದು ಬೆತ್ತಲೆ ಫೋಟೋ ಕಳುಹಿಸಿದ ಯುವತಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಮಾತಿಗೆ ಮಣಿದು ಬೆತ್ತಲೆ ಫೋಟೋ ಕಳುಹಿಸಿದ ಯುವತಿಗೆ ಬಿಗ್ ಶಾಕ್

ಮೂರು ವರ್ಷಗಳಿಂದ ಪ್ರೀತಿಸಿದ ಯುವತಿಯ ಅಶ್ಲೀಲ ಫೋಟೋವನ್ನು ಆಕೆಯ ಕುಟುಂಬದವರ ಮೊಬೈಲ್ ಗೆ ಕಳುಹಿಸಿ ಕೊಲೆ ಬೆದರಿಕೆ ಹಾಕಿದ್ದ ಯುವಕನನ್ನು ಕೊಳ್ಳೇಗಾಲ ಕಾಣೆ ಪೊಲೀಸರು ಬಂಧಿಸಿದ್ದಾರೆ.

ಮಳವಳ್ಳಿಯ ಟಿಕೆ ಹಳ್ಳಿ ಪ್ರಶಾಂತ ಬಂಧಿತ ಆರೋಪಿ. ಈತ ಕೊಳ್ಳೇಗಾಲದ ಯುವತಿಯನ್ನು ಮೂರು ವರ್ಷಗಳಿಂದ ಪ್ರೀತಿಸಿದ್ದ. ಇವರ ಪ್ರೀತಿ ವಿಚಾರ ಯುವತಿ ಮನೆಯವರಿಗೆ ಗೊತ್ತಾಗಿ ಮದುವೆಗೆ ನಿರಾಕರಿಸಿದ್ದಾರೆ.

ಪ್ರಶಾಂತ ಯುವತಿಗೆ ಕರೆ ಮಾಡಿ ಬೆತ್ತಲೆ ಫೋಟೋ ಕಳುಹಿಸುವಂತೆ ಬಲವಂತ ಮಾಡಿದ್ದಾನೆ. ಇಲ್ಲದಿದ್ದರೆ ಮದುವೆಯಾಗುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಆತನ ಮಾತು ನಂಬಿದ ಯುವತಿ ಫೋಟೋ ಕಳುಹಿಸಿದ್ದಾಳೆ. ಕೆಲ ದಿನಗಳ ನಂತರದಲ್ಲಿ ಪ್ರಶಾಂತ ಯುವತಿಯ ಬೆತ್ತಲೆ ಫೋಟೋಗಳನ್ನು ಆಕೆಯ ಮನೆಯವರಿಗೆ ಕಳುಹಿಸಿ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ನೊಂದ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...