alex Certify ಮೆಟ್ರೋದಲ್ಲೇ ಮಹಿಳೆಗೆ ಕಿರುಕುಳ: ಕಿಕ್ಕಿರಿದ ರೈಲಲ್ಲಿ ಮೈಮುಟ್ಟಿ ಅನುಚಿತ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋದಲ್ಲೇ ಮಹಿಳೆಗೆ ಕಿರುಕುಳ: ಕಿಕ್ಕಿರಿದ ರೈಲಲ್ಲಿ ಮೈಮುಟ್ಟಿ ಅನುಚಿತ ವರ್ತನೆ

ಕೋಲ್ಕತ್ತಾ: ಕೋಲ್ಕತ್ತಾದ ಮೈದಾನ್ ಮೆಟ್ರೋ ನಿಲ್ದಾಣದಲ್ಲಿ ಶನಿವಾರ 25 ವರ್ಷದ ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ 63 ವರ್ಷ ವಯಸ್ಸಿನ ನಿವೃತ್ತ ಬ್ಯಾಂಕ್ ಅಧಿಕಾರಿಯನ್ನು ಬಂಧಿಸಲಾಗಿದೆ. ಆರೋಪಿ ಮೊದಲು ಕಿಕ್ಕಿರಿದ ಮೆಟ್ರೋದಲ್ಲಿ, ನಂತರ ಮೆಟ್ರೋ ನಿಲ್ದಾಣದ ಹೊರಗೆ ಅಪರಾಧ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆ ಪಾರ್ಕ್ ಸ್ಟ್ರೀಟ್ ನಿಲ್ದಾಣದಲ್ಲಿ ಮೆಟ್ರೋ ಹತ್ತಿದರು. ಆ ವ್ಯಕ್ತಿ ಅವಳೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಿ ಕಿಕ್ಕಿರಿದ ರೈಲಿನೊಳಗೆ ಅವಳನ್ನು ಅನುಚಿತವಾಗಿ ಹಿಡಿದುಕೊಂಡಿದ್ದ. ಇದರ ಬೆನ್ನಲ್ಲೇ ಮಹಿಳೆ ಗಾಬರಿಗೊಂಡು ಮುಂದಿನ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾಳೆ. ಆದಾಗ್ಯೂ, ಆರೋಪಿ ಅವಳನ್ನು ಹಿಂಬಾಲಿಸಿ ಬಂದಿದ್ದಾನೆ.

ಅವಳು ಮೆಟ್ರೋ ನಿಲ್ದಾಣದಿಂದ ಹೊರಗೆ ಓಡಲು ಪ್ರಯತ್ನಿಸುತ್ತಿದ್ದಾಗ ಆ ವ್ಯಕ್ತಿ ಮತ್ತೆ ಅವಳನ್ನು ಹಿಡಿದುಕೊಂಡು ತನ್ನೊಂದಿಗೆ ಹೋಟೆಲ್‌ಗೆ ಬರುವಂತೆ ಹೇಳಿದ್ದಾನೆ ಎಂದು ಕೋಲ್ಕತ್ತಾ ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವೇಳೆ ಮಹಿಳೆ ಸಿಟ್ಟಿಗೆದ್ದು ಎಚ್ಚರಿಕೆ ನೀಡಿದ್ದು, ಆ ವ್ಯಕ್ತಿಯನ್ನು ಹಿಡಿದು ಹತ್ತಿರದಲ್ಲಿದ್ದ ತನ್ನ ಸ್ನೇಹಿತರನ್ನು ಕರೆದಳು. ಪಕ್ಕದಲ್ಲಿದ್ದವರು ಕೂಡ ಆಕೆಯ ರಕ್ಷಣೆಗೆ ಬಂದು ಆ ವ್ಯಕ್ತಿಯನ್ನು ಹಿಡಿದುಕೊಂಡರು. ಬಳಿಕ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಶೇಕ್ಸ್ ಪಿಯರ್ ಸರಣಿ ಪೊಲೀಸರಿಗೆ ನಿವೃತ್ತ ಬ್ಯಾಂಕ್ ಅಧಿಕಾರಿಯನ್ನು ಹಸ್ತಾಂತರಿಸಲಾಯಿತು.

ಆರೋಪಿಯನ್ನು ಭಾನುವಾರ ಬ್ಯಾಂಕ್‌ ಶಾಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬುಧವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...