alex Certify ಸತತ 22ನೇ ತಿಂಗಳು 100 ಕೋಟಿ ರೂ. ದಾಟಿದ ತಿರುಪತಿ ತಿಮ್ಮಪ್ಪನ ಆದಾಯ: 2023ರಲ್ಲಿ 1398 ಕೋಟಿ ರೂ. ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 22ನೇ ತಿಂಗಳು 100 ಕೋಟಿ ರೂ. ದಾಟಿದ ತಿರುಪತಿ ತಿಮ್ಮಪ್ಪನ ಆದಾಯ: 2023ರಲ್ಲಿ 1398 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸತತ 22ನೇ ತಿಂಗಳು 100 ಕೋಟಿ ರೂಪಾಯಿ ಆದಾಯ ದಾಟಿದೆ.

2023ರಲ್ಲಿ 1398 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು, 2022ಕ್ಕೆ ಹೋಲಿಸಿದರೆ ಹುಂಡಿ ಆದಾಯ ಕಡಿಮೆಯಾಗಿದೆ. 2022ರಲ್ಲಿ 2.37 ಕೋಟಿ ಭಕ್ತರು ತಿರುಪತಿಗೆ ಭೇಟಿ ನೀಡಿದ್ದು, 1,450 ಕೋಟಿ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರೂ, ಸುಮಾರು 50 ಕೋಟಿ ರೂಪಾಯಿಯಷ್ಟು ಕಡಿಮೆ ಆದಾಯ ಬಂದಿದೆ. 2023ರ ಜುಲೈನಲ್ಲಿ 129 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು ವರ್ಷದ ಗರಿಷ್ಠ ಆದಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...