alex Certify ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಹಳ್ಳಿ ಶ್ರೀಗಳಿಂದ ಕೊರೋನಾ ಕುರಿತಾಗಿ ಶಾಕಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಹಳ್ಳಿ ಶ್ರೀಗಳಿಂದ ಕೊರೋನಾ ಕುರಿತಾಗಿ ಶಾಕಿಂಗ್ ಮಾಹಿತಿ

ಹಾಸನ: ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೊರೊನಾ ವೈರಸ್ ಕುರಿತಂತೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಕೊರೊನಾ ಸೋಂಕು ಕಡಿಮೆಯಾಗುವುದಿಲ್ಲ. ಇದು ದೂರವಾಗಲು ಇನ್ನೂ ಹತ್ತು ವರ್ಷ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೊರೋನಾ ವೈರಸ್ ರೂಪಾಂತರವಾಗಿರುವ ಬ್ರಿಟನ್ ವೈರಸ್ ಕುರಿತಾಗಿ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಅವರು ತಿಳಿಸಿದ್ದಾರೆ.

ಹೊಸವರ್ಷದಲ್ಲಿ ಗ್ರಹಗಳೇ ಬದಲಾವಣೆಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಅಕಾಲಿಕ ಮಳೆ, ಜಲಸಂಬಂಧಿ ಅನಾಹುತಗಳು ಸಂಭವಿಸಬಹುದು. ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ರಾಜಕೀಯ ಧ್ರುವೀಕರಣವಾಗಲಿದ್ದು ಸಾಕಷ್ಟು ಬದಲಾವಣೆಯಾಗುತ್ತದೆ. ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿಯೂ ಮಹತ್ವದ ಬದಲಾವಣೆಗಳು ಆಗುತ್ತವೆ ಎಂದು ಶ್ರೀಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...