alex Certify ಮಗುವಿಗೆ ಇಂಥ ಹೆಸರಿಟ್ಟು ನಗೆಪಾಟಲಿಗೀಡಾದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಇಂಥ ಹೆಸರಿಟ್ಟು ನಗೆಪಾಟಲಿಗೀಡಾದ ಮಹಿಳೆ…!

ಹೆಸರಿನಲ್ಲಿನೇದಿ ? ಕರೆಯಲು ಒಂದು ಹೆಸರಾದ್ರೆ ಆಯ್ತು ಎನ್ನುವವರಿದ್ದಾರೆ. ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ, ಹೆಸರಿಡುವುದು ಸವಾಲಿನ ಕೆಲಸ. ಮಗು ಹುಟ್ಟಿದ ಮೇಲೆ ಅಲ್ಲಿ-ಇಲ್ಲಿ ತಡಕಾಡಿ ಒಂದು ಹೆಸರು ಇಡ್ತಾರೆ. ಮಕ್ಕಳಿಗೆ ಹೆಸರಿಡುವ ಮೊದಲು ಅದರ ಅರ್ಥ ಪಾಲಕರಿಗೆ ತಿಳಿದಿರಬೇಕು. ಇಲ್ಲವಾದ್ರೆ ಈ ಮಹಿಳೆ ಅನುಭವಿಸಿದ ಕಷ್ಟವನ್ನು ಅನುಭವಿಸಬೇಕಾಗುತ್ತದೆ.

ಅನ್ಯಗ್ರಹ ಜೀವಿಗಳ ವಾಹನವೆಂದು ಭಾವಿಸಿದ್ದ ಮಹಿಳೆಗೆ ಟಿವಿ ಹಾಕಿದಾಗ ಅರಿವಾಯ್ತು ಅಸಲಿ ಸತ್ಯ…!

ಮಹಿಳೆಯೊಬ್ಬಳು ಮಗುವಿಗೆ ಹೆಸರಿಟ್ಟು, ಇಕ್ಕಟ್ಟಿಗೆ ಸಿಲುಕಿದ್ದಾಳೆ. ಮಗುವಿಗೆ   ಸಾಂಪ್ರದಾಯಿಕ ಹಂಗೇರಿಯನ್ ಹೆಸರನ್ನು ಮಹಿಳೆ ಇಡಲು ಬಯಸಿದ್ದಳಂತೆ. ಆಕೆ ಹಾಗೂ ಆಕೆ ಸಂಗಾತಿ ಮೂಲತಃ ಹಂಗೇರಿಯವರು. ಮಗುವಿಗೆ Nimród ಎಂದು ನಾಮಕರಣ ಮಾಡಲು ಮುಂದಾಗಿದ್ದಳಂತೆ. ಇದು ಹಂಗೇರಿಯನ್ ಜನಪ್ರಿಯ ಹೆಸರಿನಲ್ಲಿ ಒಂದು.

ಆದ್ರೆ ಇದಕ್ಕೆ ಇಂಗ್ಲೀಷ್ ನಲ್ಲಿ ಬೇರೆ ಅರ್ಥವಿದೆ. ಮಹಿಳೆ ಮಗುವಿಗೆ ಇಡಬೇಕೆಂದುಕೊಂಡಿದ್ದ ಹೆಸರು ನಗೆಪಾಟಲಿಗೆ ಕಾರಣವಾಗಿತ್ತಂತೆ. ಇಂಗ್ಲೀಷ್ ನಲ್ಲಿ ನಿಮ್ರಾದ್ ಎಂದ್ರೆ ಈಡಿಯಟ್ ಎಂದರ್ಥ. ಇಂಗ್ಲೀಷ್ ಅರ್ಥ ತಿಳಿಯುತ್ತಿದ್ದಂತೆ ದಂಪತಿ ಮಗುವಿಗೆ ಬೇರೆ ಹೆಸರಿಡಲು ನಿರ್ಧರಿಸಿದ್ದಾರೆ.

ಸಂತಾನೋತ್ಪತ್ತಿ ಸಮಸ್ಯೆಯಿರುವ ದಂಪತಿ ಮನೆ ಈ ಜಾಗದಲ್ಲಿ ಮಲಗಿ

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಕಮೆಂಟ್ ಬರ್ತಿದೆ. ನಿಮ್ರಾದ್ ಎಂದು ಹೆಸರಿಡಲು ಬಯಸಿದ್ದೇ ಕೆಟ್ಟ ಆಲೋಚನೆ. ಯುಕೆಯಲ್ಲಿ ನಿಮ್ರಾದ್ ಹೆಸರನ್ನು ಅವಹೇಳನ ಮಾಡಲು ಬಳಸಲಾಗುತ್ತದೆ ಎಂದು ಕೆಲಸವರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...