alex Certify Expiry ಡೇಟ್ ಮಾತ್ರವಲ್ಲ ಔಷಧಿ – ಮಾತ್ರೆ ಖರೀದಿಸುವಾಗ ಇದನ್ನೂ ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Expiry ಡೇಟ್ ಮಾತ್ರವಲ್ಲ ಔಷಧಿ – ಮಾತ್ರೆ ಖರೀದಿಸುವಾಗ ಇದನ್ನೂ ಚೆಕ್ ಮಾಡಿ

ಔಷಧಿ ಅಂಗಡಿಗೆ ಹೋದಾಗ ನಾವು ಸಾಮಾನ್ಯವಾಗಿ ಔಷಧಿ, ಮಾತ್ರೆ ಮೇಲಿರುವ ಕೊನೆ ದಿನಾಂಕವನ್ನು ಪರಿಶೀಲನೆ ಮಾಡ್ತೆವೆ. ಔಷಧಿ ಎಕ್ಸ್ಪೇರಿ ಡೇಟ್ ಬಗ್ಗೆ ಮಾತ್ರವಲ್ಲ ಬೇರೆ ಕೆಲ ವಿಷ್ಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಔಷಧಿ ಅಮಲೇರಿಸುತ್ತದೆಯೇ ಎಂಬುದನ್ನೂ ಚೆಕ್ ಮಾಡಬೇಕಾಗುತ್ತದೆ.

ಮಾತ್ರೆ ಖರೀದಿಸುವ ಮೊದಲು ಅದರ ಮೇಲೆ XRx ಗುರುತಿದೆಯಾ ಎಂಬುದನ್ನು ನೋಡಬೇಕು. ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲೆ XRx ಎಂದು ಬರೆಯಲಾಗಿರುತ್ತದೆ. ಈ ಔಷಧಿಗಳು ವ್ಯಸನಕಾರಿ. ಯಾವುದೇ ವೈದ್ಯಕೀಯ ಅಂಗಡಿಯು ಈ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಅಲ್ಲದೆ ಔಷಧವನ್ನು ಮಾರಾಟ ಮಾಡಿದ ನಂತ್ರ ಆತ ಪ್ರಿಸ್ಕ್ರಿಪ್ಷನ್ ಪ್ರತಿಯನ್ನು 2 ವರ್ಷಗಳ ಕಾಲ ಇಟ್ಟುಕೊಳ್ಳಬೇಕು.

NRx ನ ಗುರುತಿರುವ ಔಷಧಿಯನ್ನು ಖಿನ್ನತೆ, ಆತಂಕ ಅಥವಾ ಯಾವುದೇ ಕೆಟ್ಟ ಚಟವನ್ನು ಕಡಿಮೆ ಮಾಡಲು ನೀಡಲಾಗುತ್ತದೆ. ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು.

Rx ಮಾರ್ಕ್ ಇದ್ದರೆ ಈ ಔಷಧಿಗಳನ್ನು ವೈದ್ಯರ ಸಲಹೆಯ ನಂತರ ಮಾತ್ರ ತೆಗೆದುಕೊಳ್ಳಬೇಕು. ಆದರೆ ಇವು ಸಾಮಾನ್ಯ ಔಷಧಗಳಾಗಿರುತ್ತವೆ.

ಔಷಧಿ, ಮಾತ್ರೆಗಳ ಮೇಲೆ ಕೆಂಪು ಗೆರೆಯಿರುತ್ತದೆ. ಇದನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು. ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...