alex Certify ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಈ ಅವಾಸ್ತವಿಕ ಹಾಗೂ ಅಲೌಕಿಕ ವಿಚಾರಗಳೇ ಹಾಗೆ. ನಮ್ಮಲ್ಲಿ ಎಷ್ಟು ಭಯ ಮೂಡಿಸುತ್ತವೋ ಅಷ್ಟೇ ಆಸಕ್ತಿಯನ್ನೂ ಕೆರಳಿಸುತ್ತವೆ. ಇಂಥದ್ದೇ ಒಂದು ಕಾರಣದಿಂದ ಇಟಲಿಯ ಉತ್ತರ ಭಾಗದಲ್ಲಿರುವ ದ್ವೀಪವೊಂದಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ವೆನಿಸ್ ಹಾಗೂ ಲಿಡೋ ನಡುವೆ ಇರುವ ಪೊವೇಗಿಲ ಹೆಸರಿನ ಈ ದ್ವೀಪದ ಇತಿಹಾಸವನ್ನು ಕ್ರಿಶ 421ರಿಂದಲೂ ದಾಖಲಿಸಿಕೊಂಡು ಬರಲಾಗಿದೆ. ಆಗಿನಿಂದಲೂ ಸಹ ಈ ದ್ವೀಪವೆಂದರೆ ಒಂದು ರೀತಿಯ ಭಯ ಹಾಗು ಆಸಕ್ತಿಗಳೆರಡೂ ಜನರ ಮನದಲ್ಲಿ ಮೂಡಿಸಿದೆ.

ಹಿಂದೊಂದು ಕಾಲದಲ್ಲಿ, ಇಟಲಿಯಲ್ಲಿ ಪ್ಲೇಗ್ ಮಹಾಮಾರಿ ಹಬ್ಬಿದ ಸಂದರ್ಭದಲ್ಲಿ 1.6 ಲಕ್ಷ ಪ್ಲೇಗ್‌ ಪೀಡಿತರನ್ನು ಈ ದ್ವೀಪಕ್ಕೆ ಕರೆತಂದು ಅವರನ್ನು ಜೀವಂತ ಸುಟ್ಟು ಹಾಕಲಾಗಿತ್ತು. ಈ ಮೂಲಕ ಪ್ಲೇಗ್ ರೋಗ ಇನ್ನಷ್ಟು ಹಬ್ಬದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಇಷ್ಟೇ ಅಲ್ಲದೇ ಕಪ್ಪು ಜ್ವರಕ್ಕೆ ತುತ್ತಾದ ಜನರನ್ನೂ ಸಹ ಇದೇ ದ್ವೀಪದಲ್ಲಿ ದಹಿಸಲಾಗಿತ್ತು. ಆ ಕಾಲದಲ್ಲಿ ಪೊವೇಗಿಲ ದ್ವೀಪವು ಒಂದು ರೀತಿಯ ಕ್ವಾರಂಟೈನ್ ವ್ಯವಸ್ಥೆಯಂತೆ ಕೆಲಸ ಮಾಡಿತ್ತು.

ಇಷ್ಟು ಸಾಲದೆಂಬಂತೆ, 20ನೇ ಶತಮಾನದ ಆರಂಭದ ಕಾಲದಲ್ಲಿ, ಈ ದ್ವೀಪಕ್ಕೆ ಸಾಂಕ್ರಮಿಕ ರೋಗಿಗಳನ್ನು ಕರೆ ತಂದು ಬಿಡಲಾಗುತ್ತಿತ್ತು. ಆ ವೇಳೆ ಅಲ್ಲಿದ್ದ ವೈದ್ಯನೊಬ್ಬ ತನ್ನ ವೈದ್ಯಕೀಯ ಪ್ರಯೋಗಗಳನ್ನು ಈ ಅಸಹಾಯಕ ಜನರ ಮೇಲೆ ಮಾಡುತ್ತಿದ್ದ. 1930ರ ದಶಕದಲ್ಲಿ ಈ ವೈದ್ಯ ಮಾನಸಿಕ ಖಿನ್ನತೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ.

ಇಷ್ಟೆಲ್ಲಾ ಸಾವುಗಳನ್ನು ಕಂಡಿರುವ ಈ ದ್ವೀಪದಲ್ಲಿ ಲೆಕ್ಕವಿಲ್ಲದಷ್ಟು ಆತ್ಮಗಳು ಅಲೆದಾಡುತ್ತಿವೆ ಎಂಬ ಬಲವಾದ ನಂಬಿಕೆ ಇದೆ. ಈ ದ್ವೀಪಕ್ಕೆ ಮರುಜೀವ ನೀಡಲು ವೆನೆಷಿಯನ್ ಆಡಳಿತ ಸಕಲ ಯತ್ನಗಳನ್ನು ಮಾಡುತ್ತಿದೆ. ಆದರೆ ಇಲ್ಲಿ ಘಟಿಸುವ ವಿಶ್ಲೇಷಣೆಗೆ ನಿಲುಕದ ಘಟನೆಗಳ ಕಾರಣದಿಂದ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಈ ಕಾರಣಗಳಿಂದ ಈ ದ್ವೀಪ ಇಂದು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಅಕ್ಕ ಪಕ್ಕದ ಪ್ರದೇಶಗಳ ಮೀನುಗಾರರೂ ಸಹ ಈ ದ್ವೀಪಕ್ಕೆ ಬರಲು ಹೆದರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...