alex Certify ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…!

ಕೇಳುತ್ತಲೇ ರೋಮ ನವಿರೇಳಿಸುವ ಸುದ್ದಿಯೊಂದರಲ್ಲಿ, ಬೆಕ್ಕಿನ ಮರಿಯೊಂದರ ಮೇಲೆ ಮೂರು ಹುಲಿಗಳು ಒಮ್ಮೆಲೇ ದಾಳಿ ಮಾಡಿರುವ ವಿಡಿಯೋವೊಂದನ್ನು ದುಬೈ ಯುವರಾಣಿ ಶೇರ್‌ ಮಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕ್ಲಿಪ್‌ಗಳ ಸರಣಿಯನ್ನೇ ಶೇರ್‌ ಮಾಡಿಕೊಂಡ ಯುವರಾಣಿ ಶೇಯ್ಖಾ ಲತೀಫಾ ಅಲ್ ಮಕ್ತೌಮ್, ಬೆಕ್ಕಿನ ಮರಿಯನ್ನು ಸದ್ಯಕ್ಕೆ ರಕ್ಷಿಸಲಾಗಿದ್ದು ಅದೀಗ ಚೇತರಿಸಿಕೊಂಡಿದೆ ಎಂದಿದ್ದಾರೆ.

ಲೈಂಗಿಕಾಸಕ್ತಿ ಇಲ್ಲದವರಿಗಾಗಿ ಡೇಟಿಂಗ್ ಅಪ್ಲಿಕೇಶನ್…!

ಮೂರು ಹುಲಿಗಳಲ್ಲಿ ಒಂದು ಬೆಕ್ಕನ್ನು ಅದರ ಕುತ್ತಿಗೆ ಮೂಲಕ ಬಾಯಲ್ಲಿ ಕಚ್ಚಿ ಹಿಡಿದಿದ್ದು ಹುಲ್ಲಿನ ಮೇಲೆ ಬೀಳಿಸುತ್ತಲೇ ಮಿಕ್ಕ ಎರಡು ಅದನ್ನು ಸುತ್ತುವರೆದಿರುವುದನ್ನು ನೋಡಬಹುದಾಗಿದೆ.

ತನಗಿಂತ ನೂರಾರು ಪಟ್ಟು ದೊಡ್ಡದಾದ ಹಾಗೂ ಸಂಖ್ಯೆಯಲ್ಲಿ ಹೆಚ್ಚಿರುವ ಶತ್ರುಗಳ ಎದುರು ನಿಂತರೂ ಸಹ ಬೆಕ್ಕು ಧೈರ್ಯವಾಗಿ ತನ್ನ ಕೈಲಾದ ಹೋರಾಟ ಮಾಡುತ್ತಾ, ಹುಲಿಯೊಂದರತ್ತ ತನ್ನ ಉಗುರುಗಳನ್ನು ಬಳಸಿ ಪರಚಿದೆ. ದ್ವಾರಪಾಲಕರು ಈ ವೇಳೆ ಓಡಿಬಂದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ಗಾಬರಿಗೊಂಡಿದ್ದ ಬೆಕ್ಕಿನ ಮರಿಯನ್ನು ಹುಲಿಗಳಿಂದ ಗೇಟ್‌ಕೀಪರ್‌ಗಳು ರಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...