alex Certify ಜಿ 20 ಧ್ವಜ ಹಿಡಿದು ವ್ಯಕ್ತಿಯ ಸ್ಕೈಡೈವ್​ : ವಿಡಿಯೋ ಶೇರ್‌ ಮಾಡಿದ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿ 20 ಧ್ವಜ ಹಿಡಿದು ವ್ಯಕ್ತಿಯ ಸ್ಕೈಡೈವ್​ : ವಿಡಿಯೋ ಶೇರ್‌ ಮಾಡಿದ ಕೇಂದ್ರ ಸಚಿವ

ಜಿ 20 ಶೃಂಗಸಭೆಗಾಗಿ ವಿಶ್ವ ನಾಯಕರು ದೆಹಲಿಯಲ್ಲಿ ಒಗ್ಗೂಡಿದ್ದಾರೆ. ಈ ನಡುವೆ ಜಿ20 2023 ಎಂಬ ನಾಮಫಲಕ ಹೊಂದಿರುವ ಧ್ವಜ ಹಿಡಿದ ವ್ಯಕ್ತಿಯೊಬ್ಬರು ಸ್ಕೈಡೈವಿಂಗ್​ ಮಾಡಿದ್ದು ಇದರ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗಿದೆ.

ಭಾರತದ ಭೂ ವಿಜ್ಞಾನ ಸಚಿವ ಕಿರಣ್​ ರಿಜಿಜು ಶುಕ್ರವಾರದಂದು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಜಿ 20 ಸ್ಕೈಡೈವಿಂಗ್​ ಸಖತ್​ ರೋಮಾಂಚನಕಾರಿಯಾಗಿದೆ.

ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ್​ ಮಂಟಪ್​ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ 20 ನಾಯಕರ ಶೃಂಗಸಭೆಯು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದ್ದು ಇದೇ ಕಾರಣಕ್ಕಾಗಿ ಈ ವ್ಯಕ್ತಿಯು ಜಿ 20 ಧ್ವಜ ಹಿಡಿದು ಸ್ಕೈಡೈವಿಂಗ್​ ಮಾಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಚಿವ ಕಿರಣ್​ ರಿಜಿಜು, ನನಗೆ ಇದು ತುಂಬಾನೇ ಇಷ್ಟವಾಯ್ತು ಅಂತಾ ಶೀರ್ಷಿಕೆ ನೀಡಿದ್ದಾರೆ.

ಮಾರ್ಚ್​ ತಿಂಗಳಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ರಾಜಸ್ಥಾನದಲ್ಲಿ ಜಿ 20 – 2023 ಧ್ವಜವನ್ನು ಹಿಡಿದು ಸ್ಕೈಡೈವಿಂಗ್​ ಮಾಡಿದ್ದರು. ಸೌತ್​ ವೆಸ್ಟರ್ನ್​ ಏರ್​ ಕಮಾಂಡ್​ ನೀಡಿರುವ ಮಾಹಿತಿಯ ಪ್ರಕಾರ, ವಿಂಗ್​ ಕಮಾಂಡರ್​​ ಗಜಾನಂದ ಯಾದವ್​ 1000 ಅಡಿ ಎತ್ತರದಿಂದ ವಸುದೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ , ಒಂದು ಭವಿಷ್ಯ ಎಂಬ ಥೀಮ್​ ಹೊಂದಿದ್ದ ಜಿ 20 ಧ್ವಜ ಹಿಡಿದು ಸ್ಕೈಡೈವ್​ ಮಾಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...