alex Certify ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ.

ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, 5.35 ಲಕ್ಷ ರೂಪಾಯಿಗಳು. ಚಾರ್ಲ್ಸ್ III ಚಿತ್ರಿಸಿದ ಅರಮನೆಯ ಚಿತ್ರ ಇದಾಗಿದೆ.

ಹರಾಜನ್ನು ಬೋನ್‌ಹಾಮ್ಸ್ ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ವೆಬ್‌ಸೈಟ್‌ನ ಹಮಿಶ್ ವಿಲ್ಸನ್, ನನ್ನ ಜೀವಮಾನದಲ್ಲಿ ಇಷ್ಟು ದುಬಾರಿ ಬೆಲೆಯ ಪೇಂಟಿಂಗ್​ ಮಾರಾಟವಾಗಿದ್ದನ್ನು ನೋಡಿಯೇ ಇಲ್ಲ ಎಂದಿದ್ದಾರೆ. “ಈ ಆಕರ್ಷಕ ಪೇಂಟಿಂಗ್​ ರಾಜನಿಗೆ ಚಿತ್ರಕಲೆಯ ಮೇಲೆ ಇದ್ದ ಪ್ರೀತಿ ಹಾಗೂ ಸ್ಕಾಟ್‌ಲ್ಯಾಂಡ್‌ನ ಜನತೆಗೆ ಅವರ ಮೇಲಿರುವ ಆಳವಾದ ಪ್ರೇಮವನ್ನು ಸೂಚಿಸಿದೆ” ಎಂದು ಅವರು ಹೇಳಿದರು.

ಚಿತ್ರಕಲೆಯು ಅದರ ಮೂಲ ಬೆಲೆಗಿಂತ ಸುಮಾರು 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. 2001 ರಲ್ಲಿ ಬಿಡಿಸಿರುವ ಈ ಬಾಲ್ಮೋರಲ್ ಕ್ಯಾಸಲ್‌ ಅರಮನೆಯ ಚಿತ್ರವು 100 ವರ್ಣಚಿತ್ರಗಳಲ್ಲಿ ಒಂದಾಗಿದ್ದು, 18 ನೇ ಸ್ಥಾನದಲ್ಲಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...