alex Certify ಜೇಡ ಕಂಡ್ರೆ ಬೆಚ್ಚಿ ಬೀಳ್ತಾಳೆ ಇಲ್ಲೊಬ್ಬ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇಡ ಕಂಡ್ರೆ ಬೆಚ್ಚಿ ಬೀಳ್ತಾಳೆ ಇಲ್ಲೊಬ್ಬ ಯುವತಿ..!

ಟೆಕ್ಸಾಸ್: ಕೆಲವು ಮಹಿಳೆಯರು ಜಿರಳೆ ಕಂಡ್ರೆ ಮಾರುದ್ದ ದೂರ ಓಡುತ್ತಾರೆ. ಕೆಲವರಿಗೆ ಹಲ್ಲಿ ಅಂದ್ರೆ ಭಯ…..ಆದರೆ ಇಲ್ಲೊಬ್ಬ ಯುವತಿಗೆ ಜೇಡವನ್ನು ಕಂಡ್ರೆ ಸಿಕ್ಕಾಪಟ್ಟೆ ಭಯವಂತೆ. ಅದಕ್ಕೆ ಈಕೆ ಅಮೆಜಾನ್ ಡೆಲಿವರಿ ಮಾಡುವವನಲ್ಲಿ ಜೇಡ ಕೊಲ್ಲುವಂತೆ ಸಹಾಯ ಕೋರಿದ್ದಾಳೆ.

ಹೌದು, ಈ ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್ ನಲ್ಲಿ. ಅಮೆಜಾನ್ ನಲ್ಲಿ ತನಗೆ ಬೇಕಾದ ವಸ್ತು ಖರೀದಿ ಮಾಡಿದ್ದಳು. ಇದನ್ನು ಕೊಡಲು ಬಂದ ವ್ಯಕ್ತಿ ಬಳಿ ತನ್ನ ಭಯವನ್ನು ಹೇಳಿಕೊಂಡಿದ್ದಾಳೆ. ಡೆಲಿವರಿಗೂ ಮುನ್ನ ನೋಟ್‌ ನಲ್ಲಿ ಹೀಗೆ ಬರೆದುಕೊಂಡಿದ್ದಳು. ‘’ಮನೆ ಮುಂಬಾಗಿಲಿನಲ್ಲೇ ಜೇಡವಿದೆ. ಅದನ್ನು ಕಂಡರೆ ನನಗೆ ಸಿಕ್ಕಾಪಟ್ಟೆ ಹೆದರಿಕೆಯಾಗುತ್ತದೆ. ಬಾಗಿಲಿನ ಬಳಿ ಬರಲೂ ಕೂಡ ಭಯವಾಗುತ್ತದೆ. ದಯವಿಟ್ಟು ಅದನ್ನು ಕೊಲ್ಲುವಿರಾ ?’’ ಎಂದು ಡೆಲಿವರಿ ಬಾಯ್ ನಲ್ಲಿ ಕೇಳಿಕೊಂಡಿದ್ದಾಳೆ.

BIG NEWS: ಟಿ ಸೀರಿಸ್​ ಕಂಪನಿ ಎಂಡಿ ಭೂಷಣ್​ ಕುಮಾರ್​ ವಿರುದ್ಧ ರೇಪ್‌ ಕೇಸ್

ಇನ್ನು ಯುವತಿಯ ಮಾತಿಗೊಪ್ಪಿದ ಡೆಲಿವರಿ ಬಾಯ್ ತನ್ನ ಶೂನಲ್ಲಿ ಜೇಡವನ್ನು ಹೊಡೆದು ಕೊಂದಿದ್ದಾನೆ. ಇದರಿಂದ ಯುವತಿಗೆ ಬಹಳ ಸಂತಸವಾಗಿದೆಯಂತೆ. ಸದ್ಯ ಈ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯುವತಿ ಧನ್ಯವಾದ ತಿಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...