alex Certify BIG NEWS: ಟಿ ಸೀರಿಸ್​ ಕಂಪನಿ ಎಂಡಿ ಭೂಷಣ್​ ಕುಮಾರ್​ ವಿರುದ್ಧ ರೇಪ್‌ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟಿ ಸೀರಿಸ್​ ಕಂಪನಿ ಎಂಡಿ ಭೂಷಣ್​ ಕುಮಾರ್​ ವಿರುದ್ಧ ರೇಪ್‌ ಕೇಸ್

ಟಿ ಸಿರೀಸ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್​ ಕುಮಾರ್​ ವಿರುದ್ಧ ಅಂಧೇರಿಯ ಡಿ ಎನ್​ ನಗರ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ತಮ್ಮ ಕಂಪನಿಯಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ದಾಖಲಾದ ಎಫ್​ಐಆರ್​ನಲ್ಲಿ 30 ವರ್ಷದ ಮಹಿಳೆ ಸೆಪ್ಟೆಂಬರ್​ 2017ರಿಂದ ಕಳೆದ ವರ್ಷದವರೆಗೂ ಭೂಷಣ್​ ಕುಮಾರ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಈ ವಿಚಾರವನ್ನ ಎಲ್ಲಿ ಆದರೂ ಬಾಯ್ಬಿಟ್ಟಲ್ಲಿ ಸಾಯಿಸೋದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

ದೂರು ದಾಖಲಾದ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಮುಂಬೈ ಹಿರಿಯ ಪೊಲೀಸ್​ ಅಧಿಕಾರಿ, ಐಪಿಸಿ ಸೆಕ್ಷನ್​ 376, 420 ಹಾಗೂ 506ರ ಅಡಿಯಲ್ಲಿ ಡಿ ಎನ್​ ನಗರ ಪೊಲೀಸ್​ ಠಾಣೆಯಲ್ಲಿ ಭೂಷಣ್​ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

2018ರಲ್ಲಿ ದೇಶದಲ್ಲಿ ಮೀಟೂ ಅಭಿಯಾನ ಶುರುವಾದಾಗಲೂ ಸಹ ಭೂಷಣ್​ ಕುಮಾರ್​ ವಿರುದ್ಧ ಅತ್ಯಾಚಾರ ಆರೋಪಗಳು ಕೇಳಿ ಬಂದಿದ್ದವು. ಆದರೆ ಆಗ ಆರೋಪ ಮಾಡಿದ್ದ ಮಹಿಳೆಯೇ ಈಗ ಪ್ರಕರಣ ದಾಖಲಿಸಿದ್ದಾರಾ ಅನ್ನೋದು ಖಚಿತವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...