alex Certify ಸ್ನೇಹಿತನೊಂದಿಗೆ ಸೇರಿ ಪತಿ ಕೊಲೆಗೈದ ಮಹಿಳಾ ಕಾನ್ ಸ್ಟೇಬಲ್ ಶವವಾಗಿ ಪತ್ತೆ: ಅಕ್ಕನ ಹತ್ಯೆಗೈದು ಲಾಡ್ಜ್ ಗೆ ಬಂದ ಸೋದರನೂ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನೊಂದಿಗೆ ಸೇರಿ ಪತಿ ಕೊಲೆಗೈದ ಮಹಿಳಾ ಕಾನ್ ಸ್ಟೇಬಲ್ ಶವವಾಗಿ ಪತ್ತೆ: ಅಕ್ಕನ ಹತ್ಯೆಗೈದು ಲಾಡ್ಜ್ ಗೆ ಬಂದ ಸೋದರನೂ ಆತ್ಮಹತ್ಯೆ

ಹಾಸನ/ಶಿವಮೊಗ್ಗ: ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆಯಾಗಿದ್ದಾರೆ. ಮೈಲನಹಳ್ಳಿ ಸಮೀಪ ಕಾನ್ಸ್ಟೇಬಲ್ ಸುಧಾ(39) ಮೃತದೇಹ ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮದ ಬಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ಮೃತದೇಹ ಪತ್ತೆಯಾಗಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನ ಮಗನಿಂದಲೇ ಸುಧಾ ಕೊಲೆಯಾಗಿದ್ದಾರೆ.

ಕಾರ್ ನಲ್ಲಿ ಕರೆದುಕೊಂಡು ಹೋಗಿ ಸಹೋದರ ಮಂಜುನಾಥ ಹತ್ಯೆಗೈದಿದ್ದಾನೆ. ಸಹೋದರಿಯನ್ನು ಕೊಲೆ ಮಾಡಿದ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗದ ಲಾಡ್ಜ್ ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾಹಿತಿಯನ್ನು ಆಧರಿಸಿ ಪೊಲೀಸರು ಶವ ಪತ್ತೆ ಹಚ್ಚಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಹುಳಿಯಾರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೊಡ್ಡಮ್ಮನ ಮಗಳಾದ ಅಕ್ಕ ಸುಧಾ ತನ್ನ ಗಂಡನನ್ನು ಸ್ನೇಹಿತನ ಜೊತೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಈ ವಿಷಯವಾಗಿ ಆಕೆಯ ಮೇಲಿನ ಕೋಪದಿಂದ ಕೊಲೆ ಮಾಡಿ ಬೀದಿ ಹೆಣ ಮಾಡಿರುತ್ತೇನೆಂದು ಡೆತ್ ನೋಟ್ ಬರೆದಿಟ್ಟು ತುಮಕೂರು ಜಿಲ್ಲೆ ಕೆರೆಸೂರಗೊಂಡನಹಳ್ಳಿಯ ಮಂಜುನಾಥ(26) ವಿಷಸೇವಿಸಿ ಶಿವಮೊಗ್ಗದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...