alex Certify ‘ಕಿಚ್ಚ’ ಸುದೀಪ್ ಗೆ ಅಪರೂಪದ ಉಡುಗೊರೆ ನೀಡಿದ ಕಪಿಲ್ ದೇವ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಿಚ್ಚ’ ಸುದೀಪ್ ಗೆ ಅಪರೂಪದ ಉಡುಗೊರೆ ನೀಡಿದ ಕಪಿಲ್ ದೇವ್….!

ಇತ್ತೀಚೆಗಷ್ಟೇ 1983 ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಜೀವನ ಆಧಾರಿತ ಚಿತ್ರ ’83’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ರಣವೀರ್ ಸಿಂಗ್ ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದು, ಕಪಿಲ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು.

ಈ ಚಿತ್ರ ಕನ್ನಡ ಅವತರಣಿಕೆಯಲ್ಲೂ ಬಿಡುಗಡೆಯಾಗಿದ್ದು, ಇದನ್ನು ಸುದೀಪ್ ಅವರ ಫ್ಯಾಂಟಮ್ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಪಕ ಜಾಕ್ ಮಂಜು ವಿತರಣೆ ಮಾಡಿದ್ದರು. ಇದರ ಮಧ್ಯೆ ಕಿಚ್ಚ ಸುದೀಪ್ ಅವರಿಗೆ ಕಪಿಲ್ ದೇವ್ ಅವರಿಂದ ಅಪರೂಪದ ಉಡುಗೊರೆಯೊಂದು ಸಿಕ್ಕಿದೆ.

ಕಪಿಲ್ ದೇವ್ ಅವರು ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಜೇಯ 175 ರನ್ ಗಳಿಸಿದ್ದು, ಅಂದು ತಾವು ಆಡಿದ್ದ ‘ಮಂಗೂಸ್’ ಬ್ಯಾಟನ್ನು ಕಿಚ್ಚ ಸುದೀಪ್ ಅವರಿಗೆ ಉಡುಗೊರೆಯಾಗಿ ಕಪಿಲ್ ದೇವ್ ನೀಡಿದ್ದಾರೆ. ಸುದೀಪ್ ಈ ಕುರಿತು ಟ್ವೀಟ್ ಮಾಡಿ ಕಪಿಲ್ ದೇವ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

— Kichcha Sudeepa (@KicchaSudeep) June 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...