alex Certify ಫೋಟೋ ತೆಗೆದುಕೊಳ್ಳುವ ಸಲುವಾಗಿ ಹಿರಿಯ ನಾಗರಿಕರನ್ನು ತಳ್ಳಿದವನಿಗೆ ನಟಿಯಿಂದ ಹಿಗ್ಗಾಮುಗ್ಗಾ ತರಾಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ತೆಗೆದುಕೊಳ್ಳುವ ಸಲುವಾಗಿ ಹಿರಿಯ ನಾಗರಿಕರನ್ನು ತಳ್ಳಿದವನಿಗೆ ನಟಿಯಿಂದ ಹಿಗ್ಗಾಮುಗ್ಗಾ ತರಾಟೆ…!

ಸೆಲೆಬ್ರಿಟಿಗಳ ಫೋಟೋ ತೆಗೆದುಕೊಳ್ಳುವ ಸಲುವಾಗಿ ಪಾಪರಾಜಿಗಳು ಮುಗಿ ಬೀಳುತ್ತಾರೆ. ಇದು ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚಾಗಿದ್ದು, ಒಂದು ಫೋಟೋ ಸಲುವಾಗಿ ವಿಮಾನ ನಿಲ್ದಾಣ, ಅವರುಗಳ ಮನೆ ಮುಂದೆ ದಿನಗಟ್ಟಲೆ ಕಾದು ಕುಳಿತಿರುತ್ತಾರೆ.

ಹೀಗೆ ಫೋಟೋ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಅಚಾತುರ್ಯದ ಘಟನೆಗಳು ನಡೆದಿದ್ದು, ಈ ರೀತಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ  ಫೋಟೋ ತೆಗೆದುಕೊಳ್ಳಲು ಹೋದ ವೇಳೆ ಪಾಪರಾಜಿಯೊಬ್ಬ ಹಿರಿಯ ನಾಗರಿಕರನ್ನು ಪಕ್ಕಕ್ಕೆ ತಳ್ಳಿದ್ದಾನೆ.

ಇದು ನಟಿಗೆ ಕೋಪ ತರಿಸಿದ್ದು, ಈ ರೀತಿ ವರ್ತಿಸಿದ ಪಾಪರಾಜಿಗೆ ಕಿಯಾರಾ ಅಡ್ವಾಣಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಅರಿವಿದೆಯಾ ಎಂದು ಪ್ರಶ್ನಿಸಿದ ನಟಿ, ಇನ್ನೊಮ್ಮೆ ಇದನ್ನು ಮರುಕಳಿಸಬೇಡಿ ಎಂದು ತಿಳಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...