alex Certify KIA ಟರ್ಮಿನಲ್ ನಿಂದ 3.5 ಲಕ್ಷ ಮೌಲ್ಯದ ವಸ್ತುಗಳು ಕಳುವು; FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KIA ಟರ್ಮಿನಲ್ ನಿಂದ 3.5 ಲಕ್ಷ ಮೌಲ್ಯದ ವಸ್ತುಗಳು ಕಳುವು; FIR ದಾಖಲು

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಆವರಣದಿಂದ ಬರೋಬ್ಬರಿ 3.5 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿದ್ದು, ಏರ್ ಪೋರ್ಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಗೋದ್ರೇಜ್ ಹಾಗೂ ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ಗೆ ಸಂಬಂಧಿದ ಸಾಮಗ್ರಿಗಳು ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಗೋದ್ರೇಜ್ ಕಂಪನಿಯ ಮ್ಯಾನೇಜರ್ ಕುಲದೀಪ್ ಸಿಂಗ್ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಐಪಿಸಿ ಸೆಕ್ಷನ್ 379 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಟರ್ಮಿನಲ್ 1 ಹಾಗೂ ಟರ್ಮಿನಲ್ 2 ಸಂಪರ್ಕಿಸುವ ಮಲ್ಟಿ-ಮೋಡಲ್ ಟ್ರಾನ್ಸ್ಪೋರ್ಟೇಶನ್ ಹಬ್ ನ್ನು ನಿರ್ಮಿಸಲು 3,50,000 ಮೌಲ್ಯದ ಕಬ್ಬಿಣದಿಂದ ತಯಾರಿಸಿದ 30 ರೈಲ್ಸ್ ಆಪ್ಟಿಮೈಸರ್ ಗಳು ವಿಮಾನ ನಿಲ್ದಾಣದ ಆವರಣದಲ್ಲಿ ಇರಿಸಲಾಗಿತ್ತು. ಅದರೆ ಈಗ ಈ ಸಾಮಗ್ರಿಗಳೇ ಕಳುವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...