alex Certify ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್: ಎಲ್ಲಿಯೂ ಸಿಕ್ತಿಲ್ಲ ಜನಪ್ರಿಯ ಬ್ರಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್: ಎಲ್ಲಿಯೂ ಸಿಕ್ತಿಲ್ಲ ಜನಪ್ರಿಯ ಬ್ರಾಂಡ್

ಖೋಡೆಸ್ ತ್ರಿಬಲ್ ಎಕ್ಸ್ ರಮ್ ಮದ್ಯಪ್ರಿಯರ ನೆಚ್ಚಿನ ಪಾನೀಯವಾಗಿದೆ. ಖೋಡೆಸ್ ತ್ರಿಬಲ್ ಎಕ್ಸ್ ರಮ್ ಪೂರೈಕೆ ನಿಲ್ಲಿಸಲಾಗಿದೆ ಎನ್ನುವ ಚರ್ಚೆ ನಡೆದಿದೆ. ಕಾರಣ ಎಲ್ಲಿಯೂ ಖೋಡೆಸ್ ರಮ್ ಸಿಗುತ್ತಿಲ್ಲ ಎನ್ನಲಾಗಿದೆ.

ಕಡಿಮೆ ಬೆಲೆಯ ಜನಪ್ರಿಯ ಮದ್ಯವಾಗಿದ್ದ ಖೋಡೆಸ್ ರಮ್ ಮದ್ಯಪ್ರಿಯರಿಗೆ ಅಚ್ಚುಮೆಚ್ಚಿನ ಡ್ರಿಂಕ್ಸ್. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಖೋಡೆಸ್ ರಮ್ ಬಗ್ಗೆ ಹಾಡುಗಳನ್ನು ರಚಿಸಲಾಗಿದೆ. ಪಾರ್ಟಿ ಹಾಡುಗಳಲ್ಲಿ ರಮ್ ಬಗ್ಗೆ ವರ್ಣನೆ ಮಾಡಿ ಹಾಡು ರಚಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಚಳಿಗಾಲದಲ್ಲಿ ಬೆಚ್ಚಗಿರಲು ಒಳ್ಳೆಯ ಮದ್ಯ ಇದೆಂದು ಹೇಳಲಾಗುತ್ತದೆ. ಇದು ಕಡಿಮೆ ಬೆಲೆಯ ಮದ್ಯ ಎಂದು ಹೇಳಲಾಗಿದ್ದರೂ ಜನಪ್ರಿಯತೆಯ ಕಾರಣಕ್ಕೆ ಸ್ಟಾರ್ ಹೋಟೆಲ್ ಗಳಲ್ಲಿಯೂ ಸ್ಥಾನ ಪಡೆದುಕೊಂಡಿತ್ತು. ಇತ್ತೀಚೆಗೆ ಎಲ್ಲಿಯೂ ಸ್ಟಾಕ್ ಇಲ್ಲ, ಪೂರೈಕೆ ಸ್ಥಗಿತವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಖೋಡೆಸ್ ರಮ್ ಲೋ ಕ್ಲಾಸ್ ಅಲ್ಲ, ಹೈ ಕ್ಲಾಸೂ ಅಲ್ಲ. ರಮ್ ಪ್ರಕಾರದಲ್ಲಿ ಜನಪ್ರಿಯ ಮದ್ಯ ಇದಾಗಿದೆ. ಅಂತಹ ಮದ್ಯ ಸಿಗದಿರುವುದು ಮದ್ಯಪ್ರಿಯರಿಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...