alex Certify ಮಾಸಿಕ ಪೂಜೆಗಾಗಿ ಇಂದಿನಿಂದ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸಿಕ ಪೂಜೆಗಾಗಿ ಇಂದಿನಿಂದ ತೆರೆಯಲಿದೆ ಶಬರಿಮಲೆ ಅಯ್ಯಪ್ಪ ದೇಗುಲ

ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಚಿಥಿರ ಅಟ್ಟತಿರುನಾಳ್​​ ಹಬ್ಬದ ಪ್ರಯುಕ್ತ ಇಂದಿನಿಂದ ಪುನಾರಂಭಗೊಂಡಿದೆ. ಕೋವಿಡ್​ 19 ಮಾರ್ಗಸೂಚಿ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿಯೇ ಸ್ಲಾಟ್​ ಬುಕ್ಕಿಂಗ್​ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅಲ್ಲದೇ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳು ಕೋವಿಡ್ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿರುವುದು ಕಡ್ಡಾಯವಾಗಿದೆ. ಇನ್ನೂ ಕೊರೊನಾ ಲಸಿಕೆಯ ಪಡೆಯದವರು ಅಥವಾ ಕೇವಲ 1 ಡೋಸ್​ ಲಸಿಕೆಯನ್ನು ಸ್ವೀಕರಿಸಿದವರು ಕೋವಿಡ್​ ನೆಗೆಟಿವ್​ ವರದಿಯನ್ನು ತೋರಿಸತಕ್ಕದ್ದು.

ಟಿ-20 ವಿಶ್ವಕಪ್: ಟೀಂ ಇಂಡಿಯಾದಿಂದ ಹೊರ ಬೀಳಲಿದ್ದಾರೆ ಈ ಆಟಗಾರರು….?

ಅಕ್ಟೋಬರ್​ನಲ್ಲಿ ಪ್ರವಾಹದ ಪರಿಸ್ಥಿತಿಯಿಂದಾಗಿ ಬುಕ್ಕಿಂಗ್​ ಮಾಡಿದರೂ ದೇಗುಲಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗದೇ ಹೋದವರಿರೂ ಅನುಮತಿ ನೀಡಲಾಗಿದೆ.

ಹರಿವರಾಸನದ ಧಾರ್ಮಿಕ ವಿಧಿ ವಿಧಾನಗಳ ಬಳಿಕ ರಾತ್ರಿ 9 ಗಂಟೆಗೆ ಶಬರಿಮಲೆ ದೇಗುಲವು ಬಂದ್​ ಆಗಲಿದೆ. ಮಾಸಿಕ ಪೂಜೆಯ ಬಳಿಕ ಶಬರಿಮಲೆ ದೇವಸ್ಥಾನವು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಕ್ಕಾಗಿ ನವೆಂಬರ್​​ 15ರಂದು ಮತ್ತೆ ತೆರೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...