alex Certify ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….!

This Malayali Woman Wrote A 434-metre-long Letter That Weighed 5kg To Her Brother - PinkLungiಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್​ ಉದ್ದದ ಪತ್ರವನ್ನು ಬರೆದಿದ್ದಾರೆ.

ಈ ಪತ್ರ ಅವರಿಬ್ಬರ ನಡುವಿನ ಬಾಂಧವ್ಯದ ತೀವ್ರತೆ ತೋರುತ್ತದಲ್ಲದೇ, ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ನಲ್ಲಿ ಆಕೆ ಸ್ಥಾನ ಗಳಿಸಬಹುದು. ವಿಶ್ವ ಸಹೋದರರ ದಿನದಂದು ಕೇರಳದ ಇಡುಕ್ಕಿ ಜಿಲ್ಲೆಯ ಪೀರ್ಮಡೆಯ ಇಂಜಿನಿಯರ್​ ಕೃಷ್ಣಪ್ರಿಯಾ ತನ್ನ ಕಿರಿಯ ಸಹೋದರನೊಂದಿಗೆ ಇರಲು ಸಾಧ್ಯವಾಗಿರಲಿಲ್ಲ. ತನ್ನ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ಆಕೆ ಅವನನ್ನು ಖುದ್ದಾಗಿ ಹಾರೈಸುವುದನ್ನು ಸಹ ತಪ್ಪಿಸಿಕೊಂಡಿದ್ದಳು.

ಆಕೆಯ 21 ವರ್ಷದ ಸಹೋದರ ಕೃಷ್ಣಪ್ರಸಾದ್​ ನಿರಾಸೆಗೊಂಡು ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿದ್ದ ಮತ್ತು ಆ ದಿನವನ್ನು ನೆನಪಿಸಿದ್ದ. ಆದರೆ, ಕೃಷ್ಣಪ್ರಿಯಾ ಬಹಳ ಸಮಯದವರೆಗೆ ಆ ಮೆಸೇಜ್ ನೋಡಿರಲಿಲ್ಲ, ಇದು ಅವಳ ಸಹೋದರನಿಗೆ ಇನ್ನಷ್ಟು ನೋಯಿಸಿತ್ತು. ಅಷ್ಟೇ ಅಲ್ಲದೇ, ಆತ ಆಕೆಯನ್ನು ವಾಟ್ಸಾಪ್​ನಲ್ಲಿ ಬ್ಲಾಕ್​ ಮಾಡಿ ಕರೆಯನ್ನೂ ಸ್ವೀಕರಿಸಿರಲಿಲ್ಲ.

ನಂತರ ಆಕೆ ತನ್ನ ಸಹೋದರನಿಗೆ ಕೈಬರಹದ ಪತ್ರವನ್ನು ಕಳುಹಿಸುವ ಮೂಲಕ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದಳು. ಈ ಪತ್ರದಲ್ಲಿ ತನ್ನ ಹೃದಯಾಂತರಾಳದ ಮಾತುಗಳನ್ನು ಬರೆಯಲು ತನಗೆ ಎ4 ಗಾತ್ರದ ಕಾಗದಕ್ಕಿಂತ ಹೆಚ್ಚು ಅಗತ್ಯವಿದೆ ಎಂದು ಅರಿತ ಕೃಷ್ಣ ಪ್ರಿಯಾ, 15 ಬಿಲ್ಲಿಂಗ್​ ಪೇಪರ್​ ಖರೀದಿಸಿ ಪ್ರತಿಯೊಂದರ ಮೇಲೆ ಬರೆಯುತ್ತಾ ಹೋದಳು. ಪತ್ರವನ್ನು 12 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು, ನಂತರ ಪೆಟ್ಟಿಗೆಯಲ್ಲಿ ಪ್ಯಾಕ್​ ಮಾಡಿದ್ದು, ಆ ಬಾಕ್ಸ್​ 5.27 ಕಿಲೋಗ್ರಾಂಗಳಷ್ಟು ತೂಕವಿತ್ತು. ಪತ್ರದ ಒಟ್ಟು ಉದ್ದ 434 ಮೀಟರ್​ಗಳಾಗಿತ್ತು !

ನನ್ನ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ನಾನು ಹಾರೈಸುವುದನ್ನು ಮರೆತಿದ್ದೆ. ನಾವು ತಾಯಿ ಮತ್ತು ಮಗನಿದ್ದಂತೆ. ಆತ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ, ಅದು ನನಗೆ ಬೇಸರ ತರಿಸಿತ್ತು. ಹೀಗಾಗಿ ದೀರ್ಘ ಪತ್ರ ಬರೆದೆ ಎಂದು ಕೃಷ್ಣಪ್ರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...