alex Certify ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿದೆ. ಆಗಸ್ಟ್​ 30ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್​ 1ರಾತ್ರಿ ಪೊಲೀಸರು ಆರೋಪಿ ಆಶಿಶ್​ ಎಂಬಾತನನ್ನು ಬಂಧಿಸಿದ್ದಾರೆ.

ತಾಯಿ ಹಾಗೂ ಮಗ ಪ್ರಕರಣ ಸಂಬಂಧ ಪರವೂರ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಸ್ವೀಕರಿಸಿದ ಬಳಿಕ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪರವೂರ್​ ಪೊಲೀಸ್​ ಠಾಣೆಯ ಎಸ್​ಹೆಚ್​​ಓ ಮಾಹಿತಿ ನೀಡಿದ್ದಾರೆ.

ಬೆಲೆ ಏರಿಕೆ ನಾಡಿನ ಜನತೆಗೆ ಬಿಜೆಪಿ ಸರ್ಕಾರದ ಕೊಡುಗೆ; ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

ದೂರಿನ ಪ್ರಕಾರ ಆರೋಪಿಯು ಮೊದಲು ಕಾರಿನೊಳಗಿದ್ದ ಮಹಿಳೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾನೆ. ಇದಕ್ಕೆ ಪುತ್ರ ಅಡ್ಡಿಯೊಡ್ಡುತ್ತಿದ್ದಂತೆಯೇ ಆಶಿಷ್​ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಪುತ್ರ ಕಾರಿನಿಂದ ಇಳಿದು ಹೊರಗೆ ಬರುತ್ತಿದ್ದಂತೆಯೇ ಆತನ ಮೇಲೂ ಆಶಿಷ್​ ಹಲ್ಲೆ ಮಾಡಿದ್ದಾನೆ. ಇದನ್ನು ತಪ್ಪಿಸಲು ಮಹಿಳೆ ಮುಂದಾದಾಗ ಅವರಿಗೂ ಹಲ್ಲೆ ಮಾಡಿದ್ದಾನೆ. ಈ ದಾಳಿಯಿಂದ ತಾಯಿ – ಮಗ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...