alex Certify ಆರು ವರ್ಷದಿಂದ ಪತಿ ಆಹಾರದಲ್ಲಿ ಮಾದಕವಸ್ತು ಬೆರೆಸುತ್ತಿದ್ದ ಪತ್ನಿ ಅಂದರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ವರ್ಷದಿಂದ ಪತಿ ಆಹಾರದಲ್ಲಿ ಮಾದಕವಸ್ತು ಬೆರೆಸುತ್ತಿದ್ದ ಪತ್ನಿ ಅಂದರ್…!

 

ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯೊಬ್ಬರನ್ನ ತನ್ನ ಪತಿಯ ಆಹಾರಕ್ಕೆ ಸತತ ಆರು ವರ್ಷಗಳಿಂದ ಮಾದಕ ವಸ್ತು ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಪತಿ ಸತೀಶ್ (38) ನೀಡಿದ ದೂರಿನ ಮೇರೆಗೆ ಆಶಾ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದಂಪತಿಗಳು 2006 ರಲ್ಲಿ ವಿವಾಹವಾಗಿ, ಪಾಲಾದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ, ಸತೀಶ್ ಅವರ ವ್ಯವಹಾರ ಅಂದುಕೊಂಡಂತೆ ನಡೆಯಲಿಲ್ಲ.‌ ಆದರೆ ಅವರು ಐಸ್ ಕ್ರೀಮ್ ಉದ್ಯಮಕ್ಕೆ ಸೇರಿದ ನಂತರ ಅದು ಬದಲಾಯಿತು. 2012 ರಲ್ಲಿ, ದಂಪತಿಗಳು ಪಾಲಕ್ಕಾಡ್‌ನಲ್ಲಿ ತಮ್ಮ ಸ್ವಂತ ಮನೆಯನ್ನು ಖರೀದಿಸಿದರು. ಆದರೆ ಈ ಸಮಯದಲ್ಲಿ ಪತಿ-ಪತ್ನಿಯ ನಡುವೆ ಕಂದಕ ಏರ್ಪಟ್ಟಿತ್ತು. ಕ್ಷುಲ್ಲಕ ವಿಚಾರಕ್ಕೂ ಆಶಾ, ಸತೀಶ್ ಜೊತೆ ಜಗಳವಾಡುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಮೊದಲ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್‌ ಶುರು

ಸಮಯ ಕಳೆದಂತೆ, ಸತೀಶ್ ಅವರು ಸಾಮಾನ್ಯವಾಗಿರದೆ, ಸುಸ್ತಾಗುತ್ತಿರುವುದನ್ನ ಗಮನಿಸಿದರು. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರು ಸತೀಶ್ ಅವರ ಸುಸ್ತಿಗೆ ಲೋ ಶುಗರ್ ಕಾರಣವಾಗಿರಬಹುದು ಎಂದು ಸಲಹೆ ನೀಡಿ, ಔಷಧ ನೀಡಿದರು. ಆದರೆ, ಔಷಧ ಸೇವಿಸಿದರೂ ಸತೀಶ್ ಅವರ ಆರೋಗ್ಯ ಸುಧಾರಿಸಿರಲಿಲ್ಲ.

ಸೆಪ್ಟೆಂಬರ್ 2021 ರಲ್ಲಿ, ಸತೀಶ್ ಅವರು ಮನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿದರು, ಈ ವೇಳೆ ಅವರ ಸ್ಥಿತಿ ಸುಧಾರಿಸುವುದನ್ನು ಗಮನಿಸಿದರು. ತನ್ನ ಹೆಂಡತಿಯ ಮೇಲೆ ಅನುಮಾನಗೊಂಡು, ಆಶಾ ತನ್ನ ಆಹಾರದಲ್ಲಿ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಕಂಡುಹಿಡಿಯಲು ಅವರ ಸ್ನೇಹಿತನ ಸಹಾಯ ಕೇಳಿದರು.

ಸತೀಶ್ ಅವರ ಸ್ನೇಹಿತರು ಆಶಾಳನ್ನು ಸಂಪರ್ಕಿಸಿದಾಗ, ಅವಳು ಸತೀಶ್‌ನ ಆಹಾರಕ್ಕೆ ಔಷಧವನ್ನು ಸೇರಿಸುತ್ತಿದ್ದಳು ಎಂದು ಒಪ್ಪಿಕೊಂಡು, ಅವರಿಗೆ ವಾಟ್ಸಾಪ್‌ನಲ್ಲಿ ಔಷಧಿಯ ಚಿತ್ರವನ್ನು ಸಹ ಕಳುಹಿಸಿದ್ದಾಳೆ. ತನ್ನ ಸ್ನೇಹಿತನಿಗೆ ಕಳುಹಿಸಿದ್ದ ಸಂದೇಶ ಹಾಗೂ ಮನೆಯೊಳಗಿನ ಸಿಸಿ ಟಿವಿ ದೃಶ್ಯಗಳನ್ನು ಸಾಕ್ಷಿಯಾಗಿಟ್ಟುಕೊಂಡ ಸತೀಶ್, ತನ್ನ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.‌

ಆಶಾ, ಸತೀಶ್ ಕಚೇರಿಗೆ ಕೊಂಡೊಯ್ದ ಆಹಾರದ, ಜೊತೆಗೆ ನೀರಲ್ಲೂ ಸಹ ಮದ್ದು ಬೆರೆಸಿದ್ದಾಳೆ. ಸತೀಶ್ ತನ್ನ ಆಸ್ತಿಯಿಂದ ಆಕೆಗೆ ಏನನ್ನೂ ನೀಡಿಲ್ಲ. ಆತನ ಎಲ್ಲಾ ಆಸ್ತಿಯನ್ನು ತನ್ನ ಕುಟುಂಬ ಸದಸ್ಯರು ಮತ್ತು ಸಹೋದರರಿಗೆ ನೀಡುತ್ತಾನೆ ಎಂದು ಆಶಾ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಸಧ್ಯ ಆರೋಪಿ ಆಶಾಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...