alex Certify ದೆಹಲಿಯಲ್ಲಿ ಮೊದಲ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್‌ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಮೊದಲ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್‌ ಶುರು

ಮಾಲಿನ್ಯದ ವಿರುದ್ಧ ದೀರ್ಘಕಾಲೀನ ಸಮರದಲ್ಲಿ ಹೋರಾಡುತ್ತಿರುವ ರಾಷ್ಟ್ರ ರಾಜಧಾನಿ ಪ್ರದೇಶದ ದಕ್ಷಿಣ ದೆಹಲಿಯ ಮೊದಲ ಖಾಸಗಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಅನ್ನು ಫೆಬ್ರವರಿ 6ರಂದು ಅಳವಡಿಸಲಾಗಿದೆ.

“ಎಎಪಿ ಸರ್ಕಾರದ ಏಕ-ಗವಾಕ್ಷಿ ಸೌಲಭ್ಯದ ಅಡಿಯಲ್ಲಿ, ಮೊದಲ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್ ಅನ್ನು ದಕ್ಷಿಣ ದೆಹಲಿ ನಿವಾಸಿಯೊಬ್ಬರ ಮನೆಯಲ್ಲಿ ಬಿಎಸ್ಇಎಸ್ ಡಿಸ್ಕಮ್ ಅಡಿಯಲ್ಲಿ ಸ್ಥಾಪಿಸಲಾಗಿದೆ” ಎಂದು ದೆಹಲಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

BIG NEWS: ಭೀಕರ ಅಪಘಾತ; ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಈ ಏಕಗವಾಕ್ಷಿ ಸೌಲಭ್ಯವು ಖಾಸಗಿ ಮತ್ತು ಅರೆ-ಸಾರ್ವಜನಿಕ ಸ್ಥಳಗಳಾದ ಅಪಾರ್ಟ್‌ಮೆಂಟ್‌ಗಳು, ಸಾಮೂಹಿಕ ಹೌಸಿಂಗ್ ಸೊಸೈಟಿಗಳು, ಆಸ್ಪತ್ರೆಗಳು, ಮಾಲ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಮಾಡುವ ಮೂಲಸೌಕರ್ಯಗಳ ತ್ವರಿತ ವಿಸ್ತರಣೆಯನ್ನು ಸುಲಭಗೊಳಿಸಲು ಅನುವಾಗುತ್ತದೆ. ಮೊದಲ ಖಾಸಗಿ ಚಾರ್ಜಿಂಗ್ ಪಾಯಿಂಟ್ ಅನ್ನು ಈ ವಾರದ ಆರಂಭದಲ್ಲಿ ದಕ್ಷಿಣ ದೆಹಲಿಯ ಮುನಿರ್ಕಾದಲ್ಲಿರುವ ಡಿಡಿಎ ಫ್ಲಾಟ್‌ವೊಂದರಲ್ಲಿ ಸ್ಥಾಪಿಸಲಾಗಿದೆ. ಎರಡನೆಯದನ್ನು ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿ ಸ್ಥಾಪಿಸುವುದಾಗಿ ವಕ್ತಾರರು ತಿಳಿಸಿದ್ದಾರೆ.

“ಬಿಎಸ್‌ಇಎಸ್ ಡಿಸ್ಕಾಮ್‌ಗಳಾದ ಬಿಆರ್‌ಪಿಎಲ್ ಮತ್ತು ಬಿವೈಪಿಎಲ್ ಗ್ರಾಹಕರು ತಮ್ಮ ಮನೆಗಳು, ಸಾಮೂಹಿಕ ವಸತಿ ಸಂಘಗಳು, ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣಗಳು, ಆರ್‌ಡಬ್ಲ್ಯೂಎ ಕಚೇರಿಗಳು, ವಾಣಿಜ್ಯ ಅಂಗಡಿಗಳು ಇತ್ಯಾದಿಗಳಲ್ಲಿ ಆನ್‌ಲೈನ್ ಸಿಂಗಲ್-ವಿಂಡೋ ಪೋರ್ಟಲ್ (ಸ್ವಿಚ್ ದೆಹಲಿ) ಮೂಲಕ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್ ಅನ್ನು ಸ್ಥಾಪಿಸಬಹುದು,” ಎಂದು ವಕ್ತಾರರು ತಿಳಿಸಿದ್ದಾರೆ.

ಈ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸಾರಿಗೆ ಇಲಾಖೆಯಿಂದ 12 ಮಾರಾಟಗಾರರ ಎಂಪ್ಯಾನೆಲ್ ಒಂದನ್ನು ಮಾಡಲಾಗಿದೆ. ಖಾಸಗಿ ಚಾರ್ಜಿಂಗ್ ನೆಟ್‌ವರ್ಕ್‌ನ ಪ್ರೋತ್ಸಾಹ ಹಾಗೂ ವಿಸ್ತರಣೆಗಾಗಿ, ಸರ್ಕಾರವು ಮೊದಲ 30,000 ಚಾರ್ಜಿಂಗ್ ಪಾಯಿಂಟ್‌ಗಳಿಗೆ ತಲಾ 6,000 ರೂ. ಒಂದು ಬಾರಿ ಸಬ್ಸಿಡಿಯನ್ನು ಒದಗಿಸುತ್ತಿದೆ. ಈ ಇವಿ ಚಾರ್ಜರ್‌ಗಳನ್ನು ಗ್ರಾಹಕರು ಎಂಪನೆಲ್ಡ್ ಮಾರಾಟಗಾರರಿಂದ ಏಕ-ಗವಾಕ್ಷಿ ಪೋರ್ಟಲ್ ಮೂಲಕ ಕ್ಯಾಪೆಕ್ಸ್ ಅಥವಾ ಚಂದಾದಾರಿಕೆ ಮಾದರಿಯಂತೆ ಖರೀದಿಸಬಹುದು.

ಕ್ಯಾಪೆಕ್ಸ್ ಮಾದರಿಯ ಅಡಿಯಲ್ಲಿ, ಗ್ರಾಹಕರು ಸಂಪೂರ್ಣ ಪಾವತಿಯನ್ನು ಎಂಪನೆಲ್ಡ್ ಮಾರಾಟಗಾರರಿಗೆ ಮುಂಗಡವಾಗಿ ಮಾಡುತ್ತಾರೆ. ಚಂದಾದಾರಿಕೆ ಮಾದರಿಯ ಅಡಿಯಲ್ಲಿ, ಮಾರಾಟಗಾರರಿಗೆ ಒಟ್ಟು ವೆಚ್ಚವನ್ನು ಗ್ರಾಹಕರು ಮೂರು ವರ್ಷಗಳಲ್ಲಿ ಸಮಾನ ಮಾಸಿಕ ಕಂತುಗಳಾಗಿ ಪಾವತಿಸುತ್ತಾರೆ, ನಂತರ ಚಾರ್ಜರ್ ಅನ್ನು ಅವನಿಗೆ ಸಂಪೂರ್ಣವಾಗಿ ವರ್ಗಾಯಿಸಲಾಗುತ್ತದೆ. ಖಾಸಗಿ ಚಾರ್ಜಿಂಗ್‌ನ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮವು ಖಾಸಗಿ ಮತ್ತು ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ದೆಹಲಿ ಸರ್ಕಾರ ಹೊಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...