alex Certify ದಂಗಾಗಿಸುವಂತಿದೆ ಫಿಫಾ ಫೈನಲ್ ಪಂದ್ಯದಂದು ಕೇರಳದಲ್ಲಾಗಿರುವ ಮದ್ಯ ಮಾರಾಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಫಿಫಾ ಫೈನಲ್ ಪಂದ್ಯದಂದು ಕೇರಳದಲ್ಲಾಗಿರುವ ಮದ್ಯ ಮಾರಾಟ…!

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕೇರಿಸಿಕೊಂಡಿರೋದು ಬಯಲಾಗಿದೆ. ಫುಟ್ಬಾಲ್ ಫೈನಲ್ ಪಂದ್ಯ ನಡೆದ ದಿನ ಕೇರಳದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿದೆ.

ಭಾನುವಾರದಂದು ವಿಶ್ವಕಪ್ ಫೈನಲ್ಸ್ ದಿನದಂದು, ಕೇರಳವು ಮದ್ಯ ಮಾರಾಟದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದುಬಂದಿದೆ. ರಾಜ್ಯದಲ್ಲಿ ಮದ್ಯದ ಮೇಲಿನ ತೆರಿಗೆಗಳು ಸುಮಾರು 250 ಪ್ರತಿಶತದಷ್ಟು ಇರುವುದರಿಂದ ಅದರಲ್ಲಿ ಪ್ರಮುಖ ಭಾಗವು ಬೊಕ್ಕಸಕ್ಕೆ ಹೋಗುತ್ತದೆ.

ರಾಜ್ಯದ ಏಕೈಕ ಮದ್ಯ ವಿತರಕರಾಗಿರುವ ಬೆವ್ಕೋ ಎಂದೂ ಕರೆಯಲ್ಪಡುವ ಕೇರಳ ರಾಜ್ಯ ಪಾನೀಯಗಳ ನಿಗಮದ (ಕೆಎಸ್‌ಬಿಸಿ) ಮೂಲಗಳ ಪ್ರಕಾರ, ರಾಜ್ಯದಲ್ಲಿ ಭಾನುವಾರ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಇದು ಭಾನುವಾರದಂದು ಸರಾಸರಿ 30 ರಿಂದ 33 ಕೋಟಿ ರೂ.ಗಳಷ್ಟಿದ್ದ ಸರಾಸರಿ ಮಾರಾಟಕ್ಕಿಂತ ಸುಮಾರು 20 ಕೋಟಿ ರೂ. ಹೆಚ್ಚು ಕಳೆದ ಭಾನುವಾರ ಇಷ್ಟು ಆದಾಯ ಬಂದಿದೆ ಎಂದು ಬೆವ್ಕೋ ಸಿಎಂಡಿ ಯೋಗೇಶ್ ಗುಪ್ತಾ ತಿಳಿಸಿದ್ದಾರೆ. ಆದರೆ ಇದರಲ್ಲಿ ಖಾಸಗಿ ಬಾರ್‌ಗಳಿಂದ ಮದ್ಯ ಮಾರಾಟದ ವಿವರ ಇಲ್ಲ.

ಅರ್ಜೆಂಟೀನಾ-ಫ್ರಾನ್ಸ್ ಫೈನಲ್‌ಗಳನ್ನು ದೊಡ್ಡ ಪರದೆಗಳಲ್ಲಿ ವೀಕ್ಷಿಸಲು ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ಕ್ಲಬ್‌ಗಳು ಸೇರಿದಂತೆ ಹಲವೆಡೆ ದೊಡ್ಡ ಕೂಟಗಳು ಇದ್ದ ಕಾರಣ ಭಾನುವಾರದ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಓಣಂ, ಕ್ರಿಸ್‌ಮಸ್ ಮೊದಲಾದ ಹಬ್ಬಗಳಂದು ಅಧಿಕ ಮದ್ಯ ಮಾರಾಟ ದಾಖಲಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...