alex Certify BREAKING NEWS: ಮತ್ತೆ ಭಾರಿ ಏರಿಕೆಯಾದ ಕೊರೋನಾ ತಡೆಗೆ ಲಾಕ್ಡೌನ್, ಸೋಮವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿ ಕೇರಳ ಸಿಎಂ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮತ್ತೆ ಭಾರಿ ಏರಿಕೆಯಾದ ಕೊರೋನಾ ತಡೆಗೆ ಲಾಕ್ಡೌನ್, ಸೋಮವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿ ಕೇರಳ ಸಿಎಂ ಆದೇಶ

ಕೇರಳದಲ್ಲಿ ಕೊರೋನಾ ಸೋಂಕು ಭಾರೀ ಏರಿಕೆಯಾದ ಹಿನ್ನಲೆಯಲ್ಲಿ ಸಂಡೇ ಲಾಕ್ ಡೌನ್ ಜೊತೆಗೆ ಸೋಮವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು.

ಕೇರಳ ಸರ್ಕಾರ ಸೋಮವಾರದಿಂದ ಜಾರಿಗೆ ಬರುವಂತೆ ನೈಟ್ ಕರ್ಫ್ಯೂ ವಿಧಿಸಿದೆ. ಹೊಸ ಆದೇಶವನ್ನು ಹೊರಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರಡಿಸಿದ್ದು, ರಾತ್ರಿ ಕರ್ಫ್ಯೂ ಅನ್ನು ಸೋಮವಾರದಿಂದ ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ವಿಧಿಸಲಾಗುವುದು ಎಂದು ಹೇಳಿದರು.

ಶನಿವಾರ 1,67,497 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 31,265 ಮಾದರಿಗಳು ಕೋವಿಡ್‌ ಪಾಸಿಟಿವ್ ವರದಿ ಬಂದಿದೆ. 153 ಸಾವುಗಳು ವರದಿಯಾಗಿವೆ. ಲಾಕ್‌ಡೌನ್‌ ಸಡಿಲಿಕೆಗಳಿಂದಾಗಿ, ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಓಣಂ ನಂತರ ಇದು ಮತ್ತಷ್ಟು ಹೆಚ್ಚಾಗಿದೆ. ಇದನ್ನು ನಿರೀಕ್ಷಿಸಿ ರಾಜ್ಯದಲ್ಲಿ ಚಿಕಿತ್ಸಾ ಸೌಲಭ್ಯ ಹೆಚ್ಚಿಸಿದ್ದೇವೆ” ಎಂದು ಅವರು ಹೇಳಿದರು.

COVID ಪ್ರಕರಣಗಳ ಹಠಾತ್ ಏರಿಕೆಯಿಂದಾಗಿ, ರಾಜ್ಯ ಸರ್ಕಾರವು ಶುಕ್ರವಾರ ರಾಜ್ಯದಲ್ಲಿ ಭಾನುವಾರ ಲಾಕ್‌ ಡೌನ್ ವಿಧಿಸಿದೆ. ಕಳೆದ ಎರಡು ವಾರಗಳಲ್ಲಿ ಇದಕ್ಕೆ ವಿನಾಯಿತಿ ನೀಡಲಾಗಿತ್ತು.

ಕಳೆದ ಕೆಲವು ದಿನಗಳಲ್ಲಿ ಕೇರಳವು ಒಟ್ಟು 30,000 ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗುತ್ತಿದ್ದು, ಪಾಸಿಟಿವಿಟಿ ದರ ಶೇಕಡ 19 ರಷ್ಟು ದಾಟಿದೆ. ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ, ವಿಪಕ್ಷಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ರಾಜ್ಯ ಸರ್ಕಾರದ ಅವಿವೇಕದ ನಿರ್ಧಾರಗಳ ವಿರುದ್ಧ ಹರಿಹಾಯ್ದಿದ್ದರು.

ಗುರುವಾರ ಮತ್ತು ಶುಕ್ರವಾರ ಕೂಡ ಕೇಂದ್ರ ಸರ್ಕಾರವು ಕೇರಳ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದು, ವೈರಸ್ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದೆ. ಅಲ್ಲದೇ ಹಲವಾರು ಸಲಹೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...