alex Certify ಭಾರೀ ಮಳೆಗೆ ಕಾರು ಸಮೇತ ಕೊಚ್ಚಿ ಹೋದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಮಳೆಗೆ ಕಾರು ಸಮೇತ ಕೊಚ್ಚಿ ಹೋದ ಮಹಿಳೆ

ಭಾರೀ ಮಳೆ ಹಾಗೂ ಪ್ರವಾಹದ ಕಾರಣ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಈ ಸಂಬಂಧ ರೆಡ್‌ ಅಲರ್ಟ್ ಘೋಷಿಸಲಾಗಿದೆ.

ಇದೇ ವೇಳೆ ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ ಮಿಕ್ಕ ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

BREAKING: ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬುಗೆ ಬಿಗ್ ಶಾಕ್, FIR ದಾಖಲು

ಮೃತಪಟ್ಟ ಮಹಿಳೆ ಇಡುಕ್ಕಿ ಜಿಲ್ಲೆಯ ಮೊಳಮಟ್ಟಂನವರು ಎನ್ನಲಾಗಿದೆ. ಪ್ರವಾಹಕ್ಕೆ ಸಿಲುಕಿದ ಈ ಮಹಿಳೆಯ ಕಾರು ಒಂದೂವರೆ ಕಿಮೀನಷ್ಟು ದೂರ ಕೊಚ್ಚಿ ಹೋಗಿದೆ. ಜಿಲ್ಲೆಯಲ್ಲಿ ಭೂಕುಸಿತದ ಅನೇಕ ಘಟನೆಗಳು ಜರುಗಿವೆ.

ಕೊಟ್ಟಾಯಂ ಜಿಲ್ಲೆಯ ಕೋಟಿಕಲ್‌ನಲ್ಲಿ 12 ಮಂದಿ ಕಾಣೆಯಾಗಿದ್ದಾರೆ. ಭೂಕುಸಿತದ ಹಿನ್ನೆಲೆಯಲ್ಲಿ ಪ್ರದೇಶವು ಜಲಾವೃತವಾಗಿದೆ. ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿರುವ ಈ ಪ್ರದೇಶವನ್ನು ತಲುಪಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಆಗುತ್ತಿಲ್ಲ.

ಕೇರಳದ ಕೇಂದ್ರ ಹಾಗೂ ದಕ್ಷಿಣದ ಜಿಲ್ಲೆಗಳು ಭಾರೀ ಮಳೆ ಕಾಣುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...