alex Certify ವುಹಾನ್‌ಗೆ ಮರಳಲು ಬಯಸಿದ ಭಾರತದ ಮೊದಲ‌ ಕೊರೋನಾ ಸೋಂಕಿತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವುಹಾನ್‌ಗೆ ಮರಳಲು ಬಯಸಿದ ಭಾರತದ ಮೊದಲ‌ ಕೊರೋನಾ ಸೋಂಕಿತೆ..!

ಬಾಲ್ಯದಿಂದ ವೈದ್ಯಳಾಗುವ ಕನಸು ಕಂಡಿದ್ದ ಕೇರಳದ ಯುವತಿ ವುಹಾನ್‌ನಲ್ಲಿ ತನ್ನ ಕನಸನ್ನ ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಆದರೆ ವಿಧಿಯಾಟ ಇಡೀ ವಿಶ್ವಕ್ಕೆ ಮಾರಕವಾಗಿರುವ ಕೋವಿಡ್ ತಗುಲಿ ವೈದ್ಯಳಾಗಬೇಕಾದವಳು ರೋಗಿಯಾದಳು.‌ ಈ ಮೂಲಕ ಕೋವಿಡ್ ವೈರಸ್ ಗೆ ತುತ್ತಾದ ಭಾರತದ ಮೊದಲ ವ್ಯಕ್ತಿಯಾದಳು. ಆ ಘಟನೆ ಸಂಭವಿಸಿ ಈಗ ಎರಡು ವರ್ಷ.

ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆಕೆಗೆ ತನ್ನ ಕೋರ್ಸ್ ಮುಗಿಸುವ ಆಸೆ ಇದೆ, ನನ್ನ ಮಗಳ ವೃತ್ತಿ ಕನಸಿಗೆ ಎಂತಾ ಕೆಟ್ಟ ತಿರುವು ಸಿಕ್ಕಿತು ಎಂದು ಆಕೆಯ ತಂದೆ ಭಾವುಕರಾಗಿದ್ದಾರೆ. ಆಕೆ ವುಹಾನ್ನಿಂದ ಭಾರತಕ್ಕೆ ಬಂದಿದ್ದೆ ದೊಡ್ಡ ಸಾಹಸ ಆ ಸಂದರ್ಭದಲ್ಲಿ ಚೀನಾ ಬಂದ್ ಆಗಿತ್ತು. ಹೇಗೊ‌ ಕಷ್ಟಪಟ್ಟು ಭಾರತಕ್ಕೆ ಬಂದಳು.‌ ಆಕೆ ಮರಳಿದ ಒಂದು ವಾರಕ್ಕೆ ಆಕೆಯಲ್ಲಿ ಕೊರೋನಾ ವೈರಸ್ ಪತ್ತೆಯಾಯಿತು.‌

BIG NEWS: ಆದಿಚುಂಚನಗಿರಿ ಮಠಾಧೀಶರ ಫೋನ್ ಕದ್ದಾಲಿಸಿದ್ದಾರೆ; ಸುಮಲತಾ ಗಂಭೀರ ಆರೋಪ

ಅವಳು ಆ ದಿನಗಳನ್ನು ನೆನೆಸಿಕೊಳ್ಳಲು ಬಯಸುವುದಿಲ್ಲ. ಆ ಘಟನೆ ನಮ್ಮ ಇಡೀ ಕುಟುಂಬಕ್ಕೆ ಅಗ್ನಿಪರೀಕ್ಷೆಯಂತಾಗಿತ್ತು.‌ ನನ್ನ ಮಗಳು ಕಳೆದ ಎರಡು ವರ್ಷಗಳಿಂದ ಮನೆಯಿಂದಲೆ ಓದುತ್ತಿದ್ದಾಳೆ. ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಆನ್‌ಲೈನ್‌ನಲ್ಲೆ ಎಂಬಿಬಿಎಸ್ ಕೋರ್ಸ್ ಮುಗಿಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾಳೆ. ಆದರೆ ಅವಳು ತನ್ನ ಕಾಲೇಜಿಗೆ ಹಿಂತಿರುಗಬೇಕಾಗಿದೆ ಏಕೆಂದರೆ ಚೀನೀ ನಿಯಮಗಳ ಪ್ರಕಾರ MBBS ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಪದವಿಯ ನಂತರ, 52 ವಾರಗಳ ಕಾಲ ಆಸ್ಪತ್ರೆಯಲ್ಲಿ ವೈಯಕ್ತಿಕ ಇಂಟರ್ನ್‌ಶಿಪ್ ಮಾಡಬೇಕು. ಆಗಲೆ ಪದವಿ ಸಂಪೂರ್ಣವಾಗುವುದು.

ಈಗ ವುಹಾನ್‌ನಲ್ಲಿಯು ಸಾಂಕ್ರಾಮಿಕವು ಉತ್ತುಂಗಕ್ಕೇರುತ್ತಿದೆ, ಆದರೆ ವಿದ್ಯಾಭ್ಯಾಸವು ಮುಖ್ಯ.‌ ಅವಳು ತನ್ನ ಪದವಿ ಮುಗಿಸಲು ಚೀನಾಕ್ಕೆ ಹೋಗಬೇಕಾಗಿದೆ. ಚೀನಾದಲ್ಲಿ ಕಲಿಯುತ್ತಿರುವ ನೂರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸಲುವಾಗಿ, ಚೀನಾದ ಅಧಿಕಾರಿಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ನಾವು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಆಕೆಯ ತಂದೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...