alex Certify ನವದಂಪತಿ ಫೋಟೋಶೂಟ್ ವೇಳೆಯೇ ನುಗ್ಗಿದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವದಂಪತಿ ಫೋಟೋಶೂಟ್ ವೇಳೆಯೇ ನುಗ್ಗಿದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ನವವಿವಾಹಿತರು ಫೋಟೋಶೂಟ್‌ಗಾಗಿ ದೇವಾಲಯದ ಒಳ ಆವರಣವನ್ನು ಪ್ರವೇಶಿಸಿ ಫೋಟೋಶೂಟ್​ ಮಾಡಿಕೊಳ್ಳುತ್ತಿದ್ದಂತೆಯೇ ಕೋಪಗೊಂಡ ಆನೆಯೊಂದು ದಾಳಿ ಮಾಡಿರುವ ಘಟನೆ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ನಡೆದಿದೆ.

ಇದರ ವಿಡಿಯೋ ವೈರಲ್​ ಆಗಿದ್ದು, ಭಯಾನಕವಾಗಿದೆ. ದಂಪತಿ ಫೋಟೋಶೂಟ್​ ಮಾಡಿಕೊಳ್ಳುತ್ತಿದ್ದ ಸಮೀಪ ಇದ್ದ ಆನೆಯಿಂದು ಉದ್ರೇಕಗೊಂಡು ಜನರ ಮೇಲೆ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ದಂಪತಿಯ ಫೋಟೋಶೂಟ್​ ಮಾಡುತ್ತಿದ್ದ ಛಾಯಾಗ್ರಾಹಕ ವೆಡ್ಡಿಂಗ್ ಮೊಜಿತೋ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಆನೆ ದಾಳಿ ಮಾಡಿರುವುದನ್ನು ಹಾಗೂ ಭಕ್ತರು ಬೆಚ್ಚಿ ಬೀಳುವುದನ್ನು ಕಾಣಬಹುದು. ದಂಪತಿಯ ಹಿಂದೆ ಆನೆ ನಿಂತಿರುವುದನ್ನು ಹಾಗೂಕೂಡಲೇ ಅದು ಕೆರಳಿ ದಾಳಿ ಮಾಡಿ ಭಕ್ತನೊಬ್ಬನ ಬಟ್ಟೆಯನ್ನು ಬಿಚ್ಚಿಹಾಕಿ ಆತನನ್ನು ಎತ್ತಿ ಹಾಕಿರುವ ಭಯಾನಕ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...