alex Certify 3 ತಿಂಗಳ ಹಿಂದೆ ಅದ್ಧೂರಿಯಾಗಿ ಪುತ್ರಿ ವಿವಾಹ ಮಾಡಿದ್ದ ದಂಪತಿ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ತಿಂಗಳ ಹಿಂದೆ ಅದ್ಧೂರಿಯಾಗಿ ಪುತ್ರಿ ವಿವಾಹ ಮಾಡಿದ್ದ ದಂಪತಿ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಆತ್ಮಹತ್ಯೆ

ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಲ್ಲೂ ಕೆಲವರಂತೂ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಬಳಿಕ ಆತ್ಮಹತ್ಯೆಯಂತಹ ಕಠೋರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಇದೀಗ ಕೇರಳ ಮೂಲದ ದಂಪತಿ ಐಷಾರಾಮಿ ಹೋಟೆಲ್ ನಲ್ಲಿ ಉಳಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ತಿಂಗಳ ಹಿಂದೆ ಇದೇ ದಂಪತಿ ಬೇರೆ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟು ವಿಫಲರಾಗಿದ್ದರು. ಇದೀಗ ಐಷಾರಾಮಿ ಹೋಟೆಲ್ ನಲ್ಲಿ ತಂಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯು ಓಣಂ ಹಬ್ಬದ ಸಂಭ್ರಮದ ನಡುವೆಯೇ ನಡೆದಿದೆ.

ಇತ್ತೀಚೆಗೆ ದಂಪತಿಯು ಮಗಳ ಅದ್ಧೂರಿ ವಿವಾಹವನ್ನು ಆಯೋಜಿಸಿತ್ತು. ದಂಪತಿ ತಮ್ಮ ಜೀವನವನ್ನು ಕೊನೆಗೊಳಿಸಲು ಅಂತಹ ಐಶ್ವರ್ಯಭರಿತ ಹೋಟೆಲ್ ಅನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬುದು ಅಚ್ಚರಿಯೆನಿಸುತ್ತದೆ.

ಗಲ್ಫ್‌ನಿಂದ ಹಿಂದಿರುಗಿದ 70 ವರ್ಷದ ಸುಗತನ್ ಮತ್ತು ಅವರ ಪತ್ನಿ 60 ವರ್ಷ ವಯಸ್ಸಿನ ಸುನಿಲಾ ಅವರು ಓಣಂ ಹಬ್ಬದ ಸಮಯದಲ್ಲಿ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು. ದಂಪತಿ ತಮ್ಮ ದುರಂತ ಕೃತ್ಯಕ್ಕೆ ಕೆಲವೇ ದಿನಗಳ ಮೊದಲು ಇತರ ಅತಿಥಿಗಳಂತೆ ಓಣಂ ಅನ್ನು ಆಚರಿಸಿದ್ದರು. ಸಾಂಪ್ರದಾಯಿಕ ಉಡುಪು ಧರಿಸಿ ಓಣಂ ಔತಣದಲ್ಲಿ ಪಾಲ್ಗೊಂಡರು. ಆದರೆ, ಸ್ವಲ್ಪ ಸಮಯದ ನಂತರ ಅವರ ಜೀವನವು ಕಠೋರವಾದ ತಿರುವು ಪಡೆಯಿತು.

ದಂಪತಿ ವಾಸವಿದ್ದ ಕೊಠಡಿಯನ್ನು ಹೋಟೆಲ್ ಸಿಬ್ಬಂದಿ ಶುಚಿಗೊಳಿಸಲು ಮುಂದಾಗಿದ್ದಾರೆ. ಬೆಲ್ ಮಾಡಿದ್ರೂ ರೂಮ್ ಬಾಗಿಲು ತೆಗೆಯದ ಕಾರಣ ಅನುಮಾನಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಗಿಲು ಒಡೆದು ಕೋಣೆಗೆ ಪ್ರವೇಶಿಸಿದಾಗ, ಡೆತ್‌ ನೋಟ್‌ ನೊಂದಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಕಂಡು ಬಂದಿದೆ. ಪತ್ರದಲ್ಲಿ ಆರ್ಥಿಕ ಸಂಕಷ್ಟ ಮತ್ತು ತಮ್ಮ ಮಗಳಿಗೆ ತೊಂದರೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಐಷಾರಾಮಿ ಹೋಟೆಲ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ?

ಸುಗತನ್ ಮತ್ತು ಸುನೀಲ ತಮ್ಮ ಜೀವನವನ್ನು ಕೊನೆಗೊಳಿಸಲು ಐಷಾರಾಮಿ ಹೋಟೆಲ್ ಅನ್ನು ಏಕೆ ಆರಿಸಿಕೊಂಡರು ಎಂಬುದು ಪ್ರಶ್ನೆಯಾಗಿದೆ. ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ. ಅರುಣ್ ಬಿ. ನಾಯರ್ ಪ್ರಕಾರ, ಶ್ರೀಮಂತ ಜೀವನಶೈಲಿಗೆ ಒಗ್ಗಿಕೊಂಡಿರುವ ವ್ಯಕ್ತಿಗಳು ಹಣಕಾಸಿನ ತೊಂದರೆಗಳನ್ನು ಎದುರಿಸುವಾಗ, ಉನ್ನತ ಮಟ್ಟದ ಹೋಟೆಲ್ ಅನ್ನು ಆಯ್ಕೆ ಮಾಡುವುದು ಅಂತಿಮ ಭೋಗವನ್ನು ನೋಡಲು. ತಮ್ಮ ಅಂತ್ಯವನ್ನು ಸಿರಿವಂತದಲ್ಲೇ ಕಳೆಯಲು ಇಚ್ಛಿಸುತ್ತಾರೆ ಎಂದು ಹೇಳಿದ್ರು.

ಮೂರು ವರ್ಷಗಳ ಹಿಂದೆ ಮಲಯಿಂಕೀಜುವಿನಲ್ಲಿ ಆಸ್ತಿಯನ್ನು ಮಾರಾಟ ಮಾಡಿದ್ದರಿಂದ ಸುಗತನ್ ಅವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ್ರು. ಮೂರು ತಿಂಗಳ ಹಿಂದೆ ಮಗಳ ಮದುವೆ ಮತ್ತು ವ್ಯಾಪಾರದ ಹೋರಾಟಗಳು ಮತ್ತಷ್ಟು ಸಂಕಷ್ಟಕ್ಕೀಡಾಯ್ತು ಎಂದು ತಿಳಿದು ಬಂದಿದೆ.

ಈ ಹಿಂದೆ ದಂಪತಿ ಬೇರೆ ಹೋಟೆಲ್‌ನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ಗಮನಾರ್ಹ. ಆದಾಗ್ಯೂ, ಆ ಹೋಟೆಲ್‌ನ ಸಿಬ್ಬಂದಿಯ ತ್ವರಿತ ಮಧ್ಯಸ್ಥಿಕೆಯಿಂದ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು, ಅವರ ಮೊದಲ ಪ್ರಯತ್ನವನ್ನು ವಿಫಲಗೊಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...