alex Certify ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು ಕೇರಳದ ಪೊಲೀಸ್ ಅಧಿಕಾರಿ. ಇದರ ವಿಡಿಯೋ ವೈರಲ್​ ಆಗಿದೆ.

ಕೇರಳ ಪೊಲೀಸರ ಅಧಿಕೃತ ಟ್ವಿಟ್ಟರ್ ಪ್ರೊಫೈಲ್‌ನಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 2006 ರ ಚಲನಚಿತ್ರ ಸಿಲ್ಲುನು ಒರು ಕಾದಲ್‌ನಿಂದ ಜಿಬಿನ್ ಎಂಬ ಹಾಡನ್ನು ಪೊಲೀಸ್ ಅಧಿಕಾರಿ ಮುಂಬೇ ವಾ ಹಾಡಿ ನೆಟ್ಟಿಗರ ಮನ ಗೆದ್ದಿದ್ದಾರೆ.

“ಶಬರಿಮಲೆ ನಿಲಕ್ಕಲ್ ಕಂಟ್ರೋಲ್ ರೂಂ ಕರ್ತವ್ಯದ ಮಧ್ಯೆ ಸಹೋದ್ಯೋಗಿ ಜಿಬಿನ್ ಅವರ ‘ಮುಂಬೇ ವಾ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೀಡಿಯೊ 7 ಸಾವಿರ ವೀಕ್ಷಣೆಗಳನ್ನು ಪಡೆದಿದ್ದು, ಸಹಸ್ರಾರು ಮಂದಿ ಹಾಡಿಗೆ ಮನಸೋತು ಕಮೆಂಟ್​ ಮಾಡುತ್ತಿದ್ದಾರೆ. ಇಂಥ ಅಮೂಲ್ಯ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಅನೇಕರು ಇಲಾಖೆಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...