alex Certify ಜೊತೆಯಾಗಿದ್ದ ವಿದ್ಯಾರ್ಥಿನಿ, ಸ್ನೇಹಿತನ ಮೇಲೆ ಹಲ್ಲೆ: ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊತೆಯಾಗಿದ್ದ ವಿದ್ಯಾರ್ಥಿನಿ, ಸ್ನೇಹಿತನ ಮೇಲೆ ಹಲ್ಲೆ: ಕಿರುಕುಳ

ಕೇರಳ: ಕೊಟ್ಟಾಯಂ ಸೆಂಟ್ರಲ್ ಜಂಕ್ಷನ್‌ನಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇಪ್ಪತ್ತರ ಹರೆಯದ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ರಾತ್ರಿಯೇ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ವಿಚಾರಣೆಯ ನಂತರ, ಅವರ ಬಂಧನವನ್ನು ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ಸೋಮವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಹತ್ತಿರದ ಆಸ್ಪತ್ರೆಯಲ್ಲಿ ಸ್ನೇಹಿತನನ್ನು ನೋಡಿಕೊಂಡು ಬಂದ ನಂತರ ಸಣ್ಣ ಉಪಾಹಾರ ಗೃಹದಲ್ಲಿ ಆಹಾರ ಸೇವಿಸಲು ನಿಂತಾಗ ಘಟನೆ ಸಂಭವಿಸಿದೆ.

ಉಪಾಹಾರ ಗೃಹದಲ್ಲಿ ಆರೋಪಿಗಳು ಯುವತಿಯ ವಿರುದ್ಧ ಅನುಚಿತ ಕಾಮೆಂಟ್‌ ಗಳನ್ನು ಮಾಡಿದ್ದಾರೆ. ಅದನ್ನು ಅವರು ವಿರೋಧಿಸಿದಾಗ ಜಗಳವಾಡಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಮಧ್ಯಪ್ರವೇಶಿಸುವ ಮೊದಲು ಆರೋಪಿಗಳು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಸಣ್ಣ ಗಾಯಗಳಾಗಿವೆ. ಕೂಡಲೇ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...